ಒಟ್ಟಾವಾ : ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಕೆನಡಾದ ಮುಂದಿನ ಪ್ರಧಾನಿಯಾಗಲು ಅಧಿಕೃತವಾಗಿ ರೇಸ್ ಪ್ರವೇಶಿಸಿದ್ದಾರೆ. ನೇಪಿಯನ್ ಪ್ರತಿನಿಧಿಸುವ ಲಿಬರಲ್ ಸಂಸದ, ಆರ್ಯ ಅವರು ಕೆನಡಾವನ್ನು “ಸಾರ್ವಭೌಮ ಗಣರಾಜ್ಯ” ಮಾಡುವ ಭರವಸೆ ನೀಡಿದ್ದಾರೆ.
ನಮ್ಮ ರಾಷ್ಟ್ರವನ್ನು ಪುನರ್ನಿರ್ಮಿಸಲು ಮತ್ತು ಭವಿಷ್ಯದ ಪೀಳಿಗೆಗೆ ಸಮೃದ್ಧಿಯನ್ನು ಭದ್ರಪಡಿಸಲು, ಹೆಚ್ಚು ಪರಿಣಾಮಕಾರಿ ಸರ್ಕಾರವನ್ನು ಮುನ್ನಡೆಸಲು ನಾನು ಕೆನಡಾದ ಮುಂದಿನ ಪ್ರಧಾನಿಯಾಗಲು ಅಖಾಡಕ್ಕೆ ದುಮುಕುತ್ತಿದ್ದೇನೆ ಎಂದು ತನ್ನ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಚಂದ್ರ ಆರ್ಯ ಅವರು ಕರ್ನಾಟಕದ ಸಿರಾ ತಾಲೂಕಿನ ದ್ವಾರಲು ಗ್ರಾಮದವರು. ಧಾರವಾಡದ ಕೌಸಾಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.