ಮಲ್ಪೆ: ಮೀನುಗಾರಿಕೆ ವೇಳೆ ಬೋಟಿನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನೋರ್ವರ ಮೃತದೇಹವು ಜ. 9ರಂದು ಬಿದ್ದ ಪರಿಸರದಲ್ಲಿ ಸಿಕ್ಕಿದೆ.
ಜನಾರ್ದನ (41) ಮೃತ ಮೀನುಗಾರ.
ಜನಾರ್ದನ ಅವರು ಲಂಬೋದರ ಎಂಬ ಆಳಸಮುದ್ರ ಬೋಟಿನಲ್ಲಿ ಕೆಲಸ ಮಾಡುತ್ತಿದ್ದರು. ಜ. 5ರಂದು ಸುಮಾರು 10 ನಾಟಿಕಲ್ ಮೈಲು ದೂರ ಸಮುದ್ರದಲ್ಲಿ ಬಲೆ ಹಾಕಿ ಮೀನುಗಾರಿಕೆ ಮಾಡುತ್ತಿದ್ದಾಗ ರಾತ್ರಿ 12 ಗಂಟೆ ಸುಮಾರಿಗೆ ಇತರ ಕೆಲಸಗಾರರು ಸೇರಿ ಬಲೆಯನ್ನು ಎಳೆಯುತ್ತಿದ್ದರು. ಈ ವೇಳೆ ಜನಾರ್ದನ ಅವರು ಆಯತಪ್ಪಿ ಬೋಟಿನಿಂದ ಸಮುದ್ರದ ನೀರಿಗೆ ಬಿದ್ದು ಕಾಣೆಯಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.