ಮುಂಬೈ: ನಟಿ ರಶ್ಮಿಕಾ ಮಂದಣ್ಣ ಅವರು ಜಿಮ್ ಮಾಡುವಾಗ ಎಡವಟ್ಟು ಸಂಭವಿಸಿ ಅವರಿಗೆ ಗಾಯವಾಗಿದೆ. ಹೀಗಾಗಿ ನಟ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಜೊತೆಯಾಗಿ ನಟಿಸುತ್ತಿದ್ದ ‘ಸಿಖಂದರ್’ ಸಿನಿಮಾ ಶೂಟ್ ಅರ್ಧಕ್ಕೆ ನಿಂತಿದೆ.
ರಶ್ಮಿಕಾ ಅವರಿಗಾದ ಗಾಯದಿಂದಾಗಿ ವಿಶ್ರಾಂತಿಗೆ ಕೋರಲಾಗಿದೆ. ವಿಶ್ರಾಂತಿ ಬಳಿಕ ಸಿನಿಮಾ ಕೆಲಸಕ್ಕೆ ಅವರು ಮರಳಲಿದ್ದಾರೆ ಎನ್ನಲಾಗಿದೆ.
‘ಜಿಮ್ ಮಾಡುವಾಗ ರಶ್ಮಿಕಾಗೆ ಇಂಜುರಿ ಆಗಿದೆ. ಸದ್ಯ ಅವರು ರಿಕವರಿ ಆಗುತ್ತಿದ್ದು, ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ. ಈ ಕಾರಣಕ್ಕೆ ಅವರ ಮುಂದಿನ ಸಿನಿಮಾಗಳ ಕೆಲಸಗಳನ್ನು ನಿಲ್ಲಿಸಲಾಗಿದೆ. ಅವರು ಈಗ ಚೇತರಿಕೆ ಕಾಣುತ್ತಿದ್ದು, ಶೀಘ್ರವೇ ಸೆಟ್‌ಗೆ ಮರಳಲಿದ್ದಾರೆ’ ಎನ್ನುತ್ತಿವೆ ಎಂದು ರಶ್ಮಿಕಾ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
‘ಸಿಖಂದರ್’ ಸಿನಿಮಾ ಶೂಟ್ ತಮ್ಮ ಕಾರಣದಿಂದ ನಿಂತಿರುವುದಕ್ಕೆ ಅವರಿಗೆ ಬೇಸರ ಇದೆ. ಈ ಕಾರಣಕ್ಕೆ ಅವರು ಸಿನಿಮಾ ಕೆಲಸಕ್ಕೆ ಮರಳಲು ಹಾತೊರೆಯುತ್ತಿದ್ದಾರೆ ಎಂದು ಹೇಳಲಾಗಿದೆ.