ಚಿತ್ರದುರ್ಗ : ಕಠಿಣ ಪರಿಶ್ರಮ, ನಿರಂತರ ಅಭ್ಯಾಸದ ಮೂಲಕ ಸ್ವರದಲ್ಲಿ ಮಾಂತ್ರಿಕತೆಯನ್ನು ಸೃಷ್ಟಿಸುವವರು ಮಾತ್ರ ದೊಡ್ಡ ಕಲಾವಿದರಾಗಿ ಬೆಳೆಯುತ್ತಾರೆಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ಪ್ರಜಾ ಕಲ್ಯಾಣ ಸಮಿತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಆಯೋಜಿಸಲಾಗಿರುವ ಗಾನ ಸಂಗಮ ರಾಜ್ಯ ಮಟ್ಟದ ಸಂಗೀತ ಸ್ಪರ್ಧಾ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಹೊಸ ಪ್ರತಿಭೆಗಳಿಗೆ ಪ್ರಜಾ ಕಲ್ಯಾಣ ಸಮಿತಿ ವೇದಿಕೆ ಒದಗಿಸಿರುವುದು ನಿಜಕ್ಕೂ ಸಂತೋಷದ ಸಂಗತಿ. ಬೆಳೆದ ಮೇಲೆ ಗುರುತಿಸಿಕೊಳ್ಳುವುದು ಸುಲಭ. ಅಲ್ಲಿಯವರೆಗೂ ಕಲಾವಿದರ ಬದುಕು ಸಂಕಷ್ಟದಲ್ಲಿರುತ್ತದೆ. ಕಲಾವಿದರು ತಮ್ಮ ಕಂಠಸಿರಿಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಬೆಳೆಯಬೇಕು. ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ
ಸುಭದ್ರವಾದ ಸಂವಿಧಾನವನ್ನಷ್ಟೆ ಕೊಟ್ಟಿಲ್ಲ. ಪ್ರತಿಯೊಬ್ಬರು ಹೇಗೆ ಬದುಕಬೇಕೆನ್ನುವ ಮಾರ್ಗದರ್ಶನ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಗೆಲುವೆ ಉದ್ದೇಶವಲ್ಲ. ಭಾಗವಹಿಸುವಿಕೆ ಮುಖ್ಯ. ತೀರ್ಪುಗಾರರು ಒಳ್ಳೆಯ ತೀರ್ಪು ಕೊಡಬೇಕೆಂದು ಸಲಹೆ ನೀಡಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತ ಸಂಗೀತಕ್ಕೆ ಸ್ವರ ಇಲ್ಲ. ಮಗು ಅಳುತ್ತಿದ್ದರೆ ತಾಯಿ ಹಾಡುತ್ತ ಸಮಾಧಾನ ಪಡಿಸುವುದು ಒಂದು ಸಂಗೀತ. ಹೃದಯ ತುಂಬಿ ಹಾಡಬೇಕು. ಸಂಗೀತಕ್ಕೆ ಕೆಲವು ನಿಯಮಗಳಿವೆ. ಕಲಾವಿದನಲ್ಲಿ ಸಂಗೀತ ಸಿರಿಯಿದ್ದರೆ ಜಗತ್ತನ್ನು ಮಂತ್ರಮುಗ್ದವನ್ನಾಗಿಸುತ್ತದೆ. ಸ್ಪರ್ಧೆಯಲ್ಲಿ ಬಹುಮಾನ ಗೆಲ್ಲುವುದಕ್ಕಿಂತ ಪಾಲ್ಗೊಳ್ಳುವುದು ಮುಖ್ಯ. ಸಂಗೀತಗಾರರಲ್ಲಿ ಕ್ರೂರತನವಿರುವುದಿಲ್ಲ. ಮೃದುತ್ವವಿರುತ್ತದೆ. ಭಕ್ತಿಗೆ ಸ್ವರ ಸೇರಿಸಿದರೆ ಸಂಗೀತವಾಗುತ್ತದೆಂದರು.
ಲೇಖಕ ಹೆಚ್.ಆನಂದ್ಕುಮಾರ್ ಮಾತನಾಡಿ ಮಾತಂಗ ಮುನಿಗಳು ಸಂಗೀತ ಕೊಟ್ಟಿದ್ದು, ಸಮಸ್ತ ಜೀವರಾಶಿಗಳಲ್ಲಿಯೂ ಸಂಗೀತ ಹೊರಹೊಮ್ಮುತ್ತದೆ. ಸಂಗೀತಕ್ಕೆ ಎಲ್ಲಾ ಪರ್ವಗಳನ್ನು ದಾಟಿ ನಿಲ್ಲುವ ಶಕ್ತಿಯಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸುವ ಮಧ್ಯದಲ್ಲಿ ಹತ್ತದಿನೈದು ನಿಮಿಷ ಸಂಗೀತವನ್ನು ಆಲಿಸುತ್ತಿದ್ದರೆಂದು ನುಡಿದರು.
ತೀರ್ಪುಗಾರ ಚಳ್ಳಕೆರೆ ಗಣೇಶ್ ಮಾತನಾಡುತ್ತ ಸಂಗೀತ ಎಂದಿಗೂ ಸಾಧಕನ ಸ್ವತ್ತು. ಶ್ರದ್ದೆ, ಭಕ್ತಿಯಿಂದ ಮಾತ್ರ ಹೆಸರಾಂತ ಸಂಗೀತಗಾರರಾಗಲು ಸಾಧ್ಯ. ಸಂಗೀತ ಸಂಸ್ಕøತಿ ಕಲಿಸುತ್ತದೆ. ಅದಕ್ಕಾಗಿ ಸಮಾಧಾನ, ತಾಳ್ಮೆಯಿರಬೇಕೆಂದು ಹೇಳಿದರು.
ಗಾಯಕ ಡಿ.ಓ.ಮುರಾರ್ಜಿ ಮಾತನಾಡಿ ಪ್ರತಿಭಾವಂತ ಹಾಡುಗಾರರಿಗೆ ಪ್ರಜಾ ಕಲ್ಯಾಣ ಸಮಿತಿ ಅವಕಾಶ ಕೊಟ್ಟಿದೆ. ಎಲ್ಲರಲ್ಲಿಯೂ ಒಂದೊಂದು ಪ್ರತಿಭೆಯಿರುತ್ತದೆ. ಪ್ರೋತ್ಸಾಹ ಸಿಗಬೇಕೆಂದರು.
ಪ್ರಜಾ ಕಲ್ಯಾಣ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಹರೀಶ್ ಟಿ.ಎನ್.ಅಧ್ಯಕ್ಷತೆ ವಹಿಸಿದ್ದರು.
ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಬೆಳಗಟ್ಟ, ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಹೆಚ್.ಪ್ಯಾರೆಜಾನ್, ಪ್ರಜಾ ಕಲ್ಯಾಣ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ್ಕುಮಾರ್ ಕೆ.ವಿ. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರತ್ನಮ್ಮ, ದಾವಣಗೆರೆ ಜಿಲ್ಲಾಧ್ಯಕ್ಷೆ ಚೌಡಮ್ಮ ವೇದಿಕೆಯಲ್ಲಿದ್ದರು.
ಪ್ರಜಾ ಕಲ್ಯಾಣ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಕರಿಯಪ್ಪ ಪೂಜಾರಿ, ಮೊಹಮದ್ ಯಾಸಿನ್, ರಾಜಶೇಖರ್ ಜಿ. ಸುಶಾಂತ, ರಾಜ್ಯ ಉಪಾಧ್ಯಕ್ಷ ಓಬಳೇಶ್
ಕಾರ್ಯಾಧ್ಯಕ್ಷ ಶ್ರೀನಿವಾಸ್ಬಾಬು ಸಿ.ಹೆಚ್. ಖಜಾಂಚಿ ಅರುಣ್ಕುಮಾರ್ ಆರ್. ಸಹ ಸಂಘಟನಾ ಕಾರ್ಯದರ್ಶಿ ಶಶಿಧರ್ ಸಿ. ರಾಜ್ಯ ಸಂಚಾಲಕ ಗಿರೀಶ್, ಕಾನೂನು ಸಲಹೆಗಾರರಾದ ಪಲ್ಲವಿ ಸಿ. ನಿರ್ದೇಶಕರುಗಳಾದ ವಿಜಯಲಕ್ಷ್ಮಿ, ಸುಶೀಲಮ್ಮ, ರಂಗಸ್ವಾಮಿ ಸಿ. ಇವರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.