ಬೆಂಗಳೂರು: ಬಿಗ್ ಬಾಸ್ ಸೀಸನ್ 11ರಿಂದ ಚೈತ್ರ ಕುಂದಾಪುರ ಔಟ್ ಆಗಿದ್ದಾರೆ. ಈ ವಾರ ದೊಡ್ಡಮನೆಯಿಂದ ಯಾರಿಗೆ ಗೇಟ್ ಪಾಸ್ ಸಿಗಬಹುದು ಎಂಬ ಸಹಜ ಕುತೂಹಲ ಎಲ್ಲರಲ್ಲೂ ಇತ್ತು.
ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹಿಂದುತ್ವದ ಫೈರ್‌ಬ್ರ್ಯಾಂಡ್ ಚೈತ್ರ ಕುಂದಾಪುರ ಬಿಗ್ ಬಾಸ್ ಮನೆ ಪ್ರವೇಶ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ದೊಡ್ಮನೆಯಲ್ಲಿ ನಡೆಯುವ ಎಲ್ಲ ಟಾಸ್ಕ್‌ಗಳಲ್ಲಿ ಅವರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು.
ಎಲ್ಲ ಸ್ಪರ್ಧಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಈ ವಾರ ಮನೆಯಿಂದ ಹೊರಹೋಗುವವರ ಲಿಸ್ಟ್‌ಗೆ ಐವರು ನಾಮಿನೇಟ್ ಆಗಿದ್ದರು. ಅದರಲ್ಲಿ ಚೈತ್ರಾ ಕುಂದಾಪುರ ಅಂತಿಮವಾಗಿ ಹೊರನಡೆದಿದ್ದಾರೆ.