ಚಿತ್ರದುರ್ಗ : ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿಯ 25 ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಜ. 14 ರಂದು ಸಂಜೆ 5:30ಕ್ಕೆ ನೆರವೇರಲಿದೆ.
ಜ. 13 ಸೋಮವಾರ ಸಂಜೆ 6 ಗಂಟೆಗೆ ಚಿತ್ರದುರ್ಗದ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಿಂದ ನಾದಸ್ವರ ಬೆಳ್ಳಿ ಪಲ್ಲಕ್ಕಿಯಲ್ಲಿ ಸಾವಿರಾರು ಅಯ್ಯಪ್ಪ ಸ್ವಾಮಿಗಳು ಭಕ್ತಾದಿಗಳು ಇರುಮುಡಿ ಹೊತ್ತು ನಗರದ ಬೀದಿಗಳಲ್ಲಿ ಸ್ವಾಮಿಯ ಆಭರಣಗಳ ಮೆರವಣಿಗೆ ನೆಡೆಸಲಿದ್ದಾರೆ.
ಜ. 14ರ ಸಂಜೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕರಾದ ಜಿ ಹೆಚ್ ತಿಪ್ಪಾರೆಡ್ಡಿ ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಶರಣ್ ಕುಮಾರ್ ವಹಿಸಲಿದ್ದಾರೆ. ದೀಪೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಡಿ ಸುಧಾಕರ್, ಶಾಸಕರಾದ ಕೆ.ಸಿ.ವಿರೇಂದ್ರ(ಪಪ್ಪಿ) ವಿಧಾನ ಪರಿಷತ್ ಸದಸ್ಯರು ಕೆ ಎಸ್ ನವೀನ್ ನರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮರ್ಚೆಂಟ್ ಬ್ಯಾಂಕ್ನ ಅಧ್ಯಕ್ಷರಾದ ಎಸ್ ಆರ್ ಲಕ್ಷ್ಮಿಕಾಂತ್ ರೆಡ್ಡಿ, ಡಿಸಿಸಿ ಬ್ಯಾಂಕ್ನ ನಿರ್ದೇಶಕರಾದ ಟಿ. ಮಹಾಂತೇಶ್ ಎಚ್ ಎಂ ದ್ಯಾಮಣ್ಣ ವರ್ತಕರಾದ ಉದಯ್ ಶೆಟ್ಟಿ ಐಶ್ವರ್ಯ ಗ್ರೂಪ್ಸ್ ಹೋಟೆಲ್ ಮಾಲಿಕರಾದ ಅರುಣ್ ಕುಮಾರ್, ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷರಾದ ದೀಪಾ ನಂದ, ಕನ್ನಿಕಾ ಪರಮೇಶ್ವರಿ ಸೌಹಾರ್ದ ನಿ ಅಧ್ಯಕ್ಷರಾದ ಎಂ ಎಸ್ ಪ್ರಾಣೇಶ್ ವಿಶ್ವ ಹಿಂದು ಪರಿಷತ್ನ ನಗರ ಅಧ್ಯಕ್ಷರಾದ ಸಿ ಅಶೋಕ್ ಮೆದೆಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ಉಪಸ್ಥಿತರಿರುವರು
ಭಕ್ತಿ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ಕರ್ನಾಟಕ ಹಿನ್ನೆಲೆ ಗಾಯಕಿ ಶ್ರೀಮತಿ ಮಾಲಿನಿ ಕೇಶವ ಪ್ರಸಾದ್ ಮತ್ತು ಸಂಗಡಿಗರು ಮಂಗಳೂರು ಸುರಭಿ ಸೌಂಡ್ ಸಿಸ್ಟಮ್ ಇದರ ಅಡಿಯಲ್ಲಿ ನಡೆಯಲಿದೆ. ಈ ಎಲ್ಲಾ ಪೂಜಾ ಸೇವಾ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಸಮಸ್ತ ಭಕ್ತಾದಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷ ಶರಣ್ ಕುಮಾರ್ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಕಾರ್ಯದರ್ಶಿಯಾದ ಎಂ ಪಿ ವೆಂಕಟೇಶ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ 9342310634 ಸಂಪರ್ಕಿಸಬಹುದಾಗಿದೆ.