ಕೋಲ್ಕತ್ತಾ: ಪಶ್ಚಿಮ ಬಂಗಾಳದ ಐಐಟಿ ಖರಗ್ಪುರದ 21 ವರ್ಷದ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಭಾನುವಾರ ಬೆಳಿಗ್ಗೆ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ವಿದ್ಯಾರ್ಥಿಯನ್ನು ಕೋಲ್ಕತ್ತಾ ನಿವಾಸಿ ಶಾನ್ ಮಲಿಕ್ ಎಂದು ಗುರುತಿಸಲಾಗಿದ್ದು, ಈತ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದುತ್ತಿದ್ದ. ಐಐಟಿ ಖರಗ್ಪುರ ನಿರ್ದೇಶಕ ಅಮಿತ್ ಪಾತ್ರ ಮಾತನಾಡಿ, ಮಲಿಕ್ ಟಾಪರ್ ಲೆವೆಲ್ ವಿದ್ಯಾರ್ಥಿ ಮತ್ತು ಬಂಗಾಳಿ ರಂಗಭೂಮಿಯಲ್ಲಿ ಭಾಗವಹಿಸಿದ್ದ ಆಲ್ರೌಂಡರ್ ಆಗಿದ್ದರು ಎಂದು ಹೇಳಿದ್ದಾರೆ.