ಬೆಂಗಳೂರು: ವೇತನ ಪರಿಷ್ಕರಣೆ ಸಂಬಂಧ ಶೀಘ್ರ ಸಭೆಗೆ ಸಾರಿಗೆ ನೌಕರರು ಆಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಸಾರಿಗೆ ನೌಕರರ ಸಂಘಟನೆ ಡಿಸೆಂಬರ್ 31ರಂದು ನಡೆಯಬೇಕಿದ್ದ ಸಾರಿಗೆ ನೌಕರರ ಮುಷ್ಕರ ವಾಪಸ್ ಪಡೆದಿದ್ದೇವೆ.
ಸಿಎಂ ಭರವಸೆ ಬೆನ್ನಲ್ಲೇ ಮುಷ್ಕರ ವಾಪಸ್ ತೆಗೆದುಕೊಂಡಿದ್ದು, ಜನವರಿ 15 ರ ನಂತರ ಬೇಡಿಕೆ ಈಡೇರಿಸುವ ಭರವಸೆ ಸಿಎಂ ನೀಡಿದರು. ಆದರೆ ಇನ್ನೂ ಸಭೆ ದಿನಾಂಕ ರಾಜ್ಯ ಸರ್ಕಾರ ನಿಗದಿ ಎಂದಿಲ್ಲ. ಕೂಡಲೇ ಸೂಕ್ತ ದಿನಾಂಕ ನಿಗದಿ ಮಾಡುವಂತೆ ಜಂಟಿ ಕ್ರಿಯಾ ಸಮಿತಿ ಪತ್ರ ಬರೆದಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸಾರಿಗೆ ನೌಕರರ ಸಂಘಟನೆ ಮನವಿ ಮಾಡಿದೆ.