ಬೆಂಗಳೂರು: ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೆ ಮತ್ತೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಾದ ಬಿಜೆಪಿ ನಾಯಕರು ದೆಹಲಿ ಗುಲಾಮರಾಗಿದ್ದಾರೆ. ಜನಪ್ರತಿನಿಧಿಗಳು ದಾರಿ ತಪ್ಪಿದಾಗ ಸರಿದಾರಿಗೆ ತರುವ ಹೊಣೆ ಜನರದ್ದಾಗಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಿಜೆಪಿ ನಾಯಕರು ಬಾಯಿ ಬಿಟ್ಟರೆ ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ರಾಜ್ಯವನ್ನೇ ಪ್ರೀತಿಸದವರು ದೇಶವನ್ನು ಹೇಗೆ ಪ್ರೀತಿಸಲು ಸಾಧ್ಯ ಎನ್ನುವುದನ್ನು ಇವರೇ ಹೇಳಬೇಕು. ಕೇಂದ್ರ ಸರ್ಕಾರ ಸೇಡು ತೀರಿಸಿಕೊಳ್ಳುವವರಂತೆ ಕರ್ನಾಟಕಕ್ಕೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಿದ್ದ ರಾಜ್ಯದ ಬಿಜೆಪಿ ನಾಯಕರು ಮತ್ತು ಸಂಸದರು ಅನ್ಯಾಯಕೋರ ಕೇಂದ್ರ ಸರ್ಕಾರವನ್ನು ಸಮರ್ಥಿಸುತ್ತಿರುವುದು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಮತ್ತು ಅವಮಾನವಾಗಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯಗಳಿಗೆ ತೆರಿಗೆ ಮತ್ತು ಸುಂಕದ ಪಾಲಿನ ರೂಪದಲ್ಲಿ ಒಟ್ಟು 1,73,030 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ನೀಡಿರುವ ಪಾಲು ಕೇವಲ 6,310 ಕೋಟಿ ರೂಪಾಯಿ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಐದರಷ್ಟು ಕನ್ನಡಿಗರಿದ್ದರೂ ದೇಶದ ಜಿಡಿಪಿಯಲ್ಲಿ ಕನ್ನಡಿಗರ ಪಾಲಿನ ಪ್ರಮಾಣ ಶೇಕಡಾ 8.4 ಆಗಿದೆ. ಅತೀ ಹೆಚ್ಚು ಜಿಎಸ್ಟಿ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಜಿಎಸ್ಟಿ ಸಂಗ್ರಹ ಶೇಕಡಾ 17ರಷ್ಟು ಹೆಚ್ಚಾಗುತ್ತಿದೆ. ಹೀಗಿದ್ದರೂ ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬರಲಾಗುತ್ತಿದೆ. ಈ ಅನ್ಯಾಯ ಯಾಕೆ? ಎಂದು ಸಿಎಂ ಪ್ರಶ್ನಿಸಿದ್ದಾರೆ. ತೆರಿಗೆ ಹಂಚಿಕೆ ಮಾಡುವಾಗಲೂ ‘’ಬಿಮಾರು’’ ರಾಜ್ಯಗಳೆಂಬ ಅಪಖ್ಯಾತಿಗೀಡಾಗಿರುವ ಬಿಹಾರ (ರೂ.17,403 ಕೋಟಿ), ಮಧ್ಯಪ್ರದೇಶ (ರೂ.13,582 ಕೋಟಿ), ರಾಜಸ್ತಾನ (ರೂ.10,426 ಕೋಟಿ) ಮತ್ತು ಉತ್ತರ ಪ್ರದೇಶಕ್ಕೆ (ರೂ.31,099 ಕೋಟಿ) ತೆರಿಗೆ ಪಾಲನ್ನು ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೇವಲ ರೂ.6,310 ಕೋಟಿ ನೀಡಿದೆ. ಇದು ಉತ್ತಮ ಆಡಳಿತ, ಸುಸ್ಥಿರ ಅಭಿವೃದ್ಧಿ ಮತ್ತು ಜಿಎಸ್ಟಿ ಸಂಗ್ರಹದಲ್ಲಿ ಮಾಡಿರುವ ಸಾಧನೆಗಾಗಿ ಕರ್ನಾಟಕಕ್ಕೆ ನೀಡಿರುವ ಶಿಕ್ಷೆಯೇ? ಕನ್ನಡಿಗರ ಬೆವರ ಗಳಿಕೆಯ ತೆರಿಗೆ ಹಣ ಭ್ರಷ್ಟ ರಾಜ್ಯಗಳ ಬೊಕ್ಕಸ ತುಂಬಲು ಯಾಕೆ ಬಳಕೆಯಾಗಬೇಕು? ಇದು ಕರ್ನಾಟಕದ ಪ್ರಾಮಾಣಿಕ ತೆರಿಗೆದಾರರಿಗೆ ಮಾಡಿರುವ ಘೋರ ಅನ್ಯಾಯವಲ್ಲವೇ? ಈ ಅನ್ಯಾಯವನ್ನು ಖಂಡಿಸಬೇಕಾಗಿರುವ ರಾಜ್ಯದ ಬಿಜೆಪಿ ನಾಯಕರು ನಿರ್ಲಜ್ಜರಾಗಿ ಸಮರ್ಥಿಸುತ್ತಿರುವುದು ಕನ್ನಡಿಗರಿಗೆ ಬಗೆಯುತ್ತಿರುವ ದ್ರೋಹವಾಗಿದೆ. ಇವರ ಆರ್ಭಟವೇನಿದ್ದರೂ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಲು ಮತ್ತು ಬೀದಿಗಳಲ್ಲಿ ಪರಸ್ಪರ ಕಚ್ಚಾಡಲು ಸೀಮಿತವಾಗಿದೆ ಎಂದು ತಿಳಿಸಿದ್ದಾರೆ ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು ನ್ಯಾಯ ಕೇಳುವ ಕನಿಷ್ಠ ಧೈರ್ಯವೂ ಇಲ್ಲದೆ ದೆಹಲಿ ಸರ್ಕಾರದ ಗುಲಾಮರಾಗಿದ್ದಾರೆ. ಜನಪ್ರತಿನಿಧಿಗಳು ಜನದ್ರೋಹಿಗಳಾದಾಗ ಅವರನ್ನು ಜನರೇ ವಿಚಾರಿಸಿಕೊಳ್ಳಬೇಕಾಗುತ್ತದೆ. ಕೇಂದ್ರದ ಕಿವುಡ ಸರ್ಕಾರ ಮತ್ತು ಬಿಜೆಪಿಯ ಮೂಗ ನಾಯಕರ ವಿರುದ್ಧ ಕನ್ನಡಿಗರೆಲ್ಲರೂ ಜಾತಿ, ಧರ್ಮ, ಪಕ್ಷ ಪಂಥಗಳನ್ನು ಮೀರಿ ದನಿ ಎತ್ತಬೇಕಾಗಿದೆ. ಇಂತಹದ್ದೊಂದು ಸಂಕಲ್ಪವನ್ನು ಸಂಕ್ರಮಣದ ಶುಭದಿನದಂದು ಪ್ರತಿಯೊಬ್ಬ ಕನ್ನಡಿಗರು ಕೈಗೊಂಡು ಕರ್ನಾಟಕವನ್ನು ಅನ್ಯಾಯ ಮತ್ತು ಅವಮಾನದಿಂದ ರಕ್ಷಿಸಬೇಕಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ತೆರಿಗೆ ಹಂಚಿಕೆ ರಾಜ್ಯಕ್ಕೆ ಮತ್ತೆ ಅನ್ಯಾಯ: ಮೋದಿಗೆ ಕೇಳುವ ಧೈರ್ಯ ರಾಜ್ಯ ಬಿಜೆಪಿಗಿಲ್ಲ, ಇವರು ದೆಹಲಿ ಗುಲಾಮರಾಗಿದ್ದಾರೆ – ಸಿಎಂ ಕಿಡಿ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ತುಳು ಸಿನಿಮಾ ‘ಜೈ’ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಅಗಮಿಸಿದ ಸುನೀಲ್ ಶೆಟ್ಟಿ
14 January 2025
ತಮಿಳುನಾಡಿನ ಮಧುರೈನಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆ ಆರಂಭ
14 January 2025
ಹೆಬ್ಬಾಳ್ಕರ್ ಶೀಘ್ರ ಗುಣಮುಖರಾಗಲೆಂದು ಹಾರೈಸಿದ ಸಿ.ಟಿ ರವಿ
14 January 2025
ಪಟಾಂಗ್ ಹಾರಿಸಿ ಮಕರ ಸಂಕ್ರಾಂತಿ ಆಚರಿಸಿದ ಅಮಿತ್ ಶಾ
14 January 2025
ಜಮ್ಮು ಕಾಶ್ಮೀರದಲ್ಲಿ ನೆಲಬಾಂಬ್ ಸ್ಫೋಟ – 6 ಸೈನಿಕರಿಗೆ ಗಾಯ
14 January 2025
LATEST Post
ವಚನ.: -ಶಿವಲೆಂಕ ಮಂಚಣ್ಣ !
15 January 2025
07:28
ವಚನ.: -ಶಿವಲೆಂಕ ಮಂಚಣ್ಣ !
15 January 2025
07:28
ತುಳು ಸಿನಿಮಾ ‘ಜೈ’ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಅಗಮಿಸಿದ ಸುನೀಲ್ ಶೆಟ್ಟಿ
14 January 2025
18:14
ಗೃಹ ಸಚಿವ ಅಮಿತ್ ಶಾ ವಿರುದ್ಧ ಶರದ್ ಪವಾರ್ ಟೀಕೆ – ಸ್ಥಾನದ ಗೌರವ ಕಾಯ್ದುಕೊಳ್ಳಲು ಸೂಚನೆ
14 January 2025
18:14
‘ಜಮ್ಮು-ಕಾಶ್ಮೀರವನ್ನು ಅಸ್ಥಿರಗೊಳಿಸಲು ಪಾಕ್ ಎಲ್ಲಾ ಪ್ರಯತ್ನ ಮಾಡ್ತಿದೆ’- ರಾಜನಾಥ್ ಸಿಂಗ್ ಟೀಕೆ
14 January 2025
17:10
ತಮಿಳುನಾಡಿನ ಮಧುರೈನಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆ ಆರಂಭ
14 January 2025
16:32
ಹೆಬ್ಬಾಳ್ಕರ್ ಶೀಘ್ರ ಗುಣಮುಖರಾಗಲೆಂದು ಹಾರೈಸಿದ ಸಿ.ಟಿ ರವಿ
14 January 2025
16:26
ಪಟಾಂಗ್ ಹಾರಿಸಿ ಮಕರ ಸಂಕ್ರಾಂತಿ ಆಚರಿಸಿದ ಅಮಿತ್ ಶಾ
14 January 2025
16:22
ಜಮ್ಮು ಕಾಶ್ಮೀರದಲ್ಲಿ ನೆಲಬಾಂಬ್ ಸ್ಫೋಟ – 6 ಸೈನಿಕರಿಗೆ ಗಾಯ
14 January 2025
16:15
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕ್ಯಾಂಟೀನ್ಗೆ ನುಗ್ಗಿದ ಲಾರಿ – ಇಬ್ಬರ ಸಾವು
14 January 2025
15:23
‘ದನದ ಕೆಚ್ಚಲು ಕೊಯ್ದ ಪ್ರಕರಣಕ್ಕೆ ರಾಜ್ಯ ಸರಕಾರದ ಧೋರಣೆಯೇ ಕಾರಣ’- ವಿಜಯೇಂದ್ರ ಟೀಕೆ
14 January 2025
14:47
ಹಳಿ ತಪ್ಪಿದ ಮೆಮು ಪ್ಯಾಸೆಂಜರ್ ರೈಲು: ಲೊಕೊ ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
14 January 2025
14:44
ಮಕರ ಸಂಕ್ರಾಂತಿ ಹಬ್ಬಕ್ಕೆ ಶುಭ ಕೋರಿದ ಮೋದಿ, ಸಿದ್ದರಾಮಯ್ಯ, ಖರ್ಗೆ
14 January 2025
13:08
ಕೆನರಾ ಬ್ಯಾಂಕ್ನಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
14 January 2025
12:30
ಇನ್ಮುಂದೆ ಸೋಲಾರ್ ಬೋಟ್ಗಳ ಓಡಾಟ
14 January 2025
11:38
ಎಚ್ಚರ: ಸಿಎಂ ಸಿದ್ದು ಹೆಸರಿನಲ್ಲಿ Free Recharge ಅಂತಾ Link ಬಂದರೆ ಕ್ಲಿಕ್ ಮಾಡಬೇಡಿ
14 January 2025
11:22
KMF ಚಾಯ್ ಪಾಯಿಂಟ್ ಒಪ್ಪಂದ – ಮಹಾ ಕುಂಭಮೇಳದಲ್ಲಿ ನಂದಿನಿ ಹಾಲಿನ ಟೀ
14 January 2025
10:56
ಸತೀಶ್ ಜಾರಕಿಹೊಳಿ, ಡಿಕೆಶಿ ನಡುವೆ ಜಟಾಪಟಿ..! ಸಿಎಲ್ಪಿ ಸಭೆಯಲ್ಲಿ ಆಗಿದ್ದೇನು..?
14 January 2025
10:20
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು
14 January 2025
09:24
ಭಾರತದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿಯ ಸ್ಪೂರ್ತಿದಾಯಕ ಕಥೆ
14 January 2025
09:00
ತುಳಸಿ ಹಲವು ಚರ್ಮರೋಗಗಳಿಗೂ ರಾಮಬಾಣ
14 January 2025
08:59
ಇಂದಿನಿಂದ ಚಳಿ- ಜೊತೆಗೆ ಹಲವು ಜಿಲ್ಲೆಗಳಲ್ಲಿ ಮಳೆ.!
14 January 2025
08:31
ಡಿವಿಎಸ್ ಪದವಿ ಪೂರ್ವ ಕಾಲೇಜು, ಸಮರ್ಥ ಮೆಡಿಕಲ್ ಅಕಾಡೆಮಿಗೆ ಮಾನ್ಯತೆ ಇಲ್ಲ
14 January 2025
08:28
ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜಿಪಂ-ತಾಪಂ ಚುನಾವಣೆ.!
14 January 2025
08:25
ಶತ್ರು ನಾಶಕ್ಕೆ ಇಲ್ಲಿದೆ ಶಾಶ್ವತ ಪರಿಹಾರ
14 January 2025
08:21
ವಚನ.: –ಮೆಡ್ಲೇರಿ ಶಿವಲಿಂಗ !
14 January 2025
08:18
ಇನ್ಮುಂದೆ ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ!!
13 January 2025
18:41
ತಿರುಪತಿಯಲ್ಲಿ ಮತ್ತೊಂದು ದುರಂತ :ಲಡ್ಡು ಕೌಂಟರ್ ನಲ್ಲಿ ಕಾಣಿಸಿಕೊಂಡ ಬೆಂಕಿ
13 January 2025
18:12
ಪ್ರೀತಿಸುವಂತೆ ಅನ್ಯಕೋಮಿನ ಯುವಕನಿಂದ ಕಿರುಕುಳ- ಅಪ್ರಾಪ್ತೆ ಆತ್ಮಹತ್ಯೆ, ಆರೋಪಿ ಬಂಧನ..!
13 January 2025
17:52
ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಪ್ರವೇಶ ಪರೀಕ್ಷೆ: ಅರ್ಜಿ ಆಹ್ವಾನ
13 January 2025
17:37
ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯಗಳ ಸಾಮರ್ಥ್ಯ ಬೆಳೆಸಿ-ಎಂ.ನಾಸಿರುದ್ದೀನ್
13 January 2025
17:35
ಸಿಎಂ ಸಿದ್ದರಾಮಯ್ಯ ತಂಡಕ್ಕೆ ಸುರ್ಜೇವಾಲ ಎಚ್ಚರಿಕೆ
13 January 2025
16:49
ಗಣರಾಜ್ಯೋತ್ಸವದಂದು ಬಾಂಬ್ ಹಾಕೋದಾಗಿ ಹೇಳಿದ್ದ ವ್ಯಕ್ತಿ ಅರೆಸ್ಟ್..!
13 January 2025
16:33