ಮುಂಬೈ: ಖ್ಯಾತ ನಟ ಮತ್ತು ನಿರ್ಮಾಪಕ ಸುದೀಪ್ ಪಾಂಡೆ ಹೃದಯಾಘಾತದಿಂದ ಜ.15 ರಂದು ನಿಧನ ಹೊಂದಿದ್ದಾರೆ.
ಮುಂಬೈ ನಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸುದೀಪ್ ಪಾಂಡೆಗೆ ನಟನೆಯ ಮೇಲೆ ಹೆಚ್ಚಿನ ಉತ್ಸಾಹ ಇದ್ದುದರಿಂದ ಅವರು ತಮ್ಮ ಕೆಲಸವನ್ನು ತೊರೆದು ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅದರಂತೆ 2007 ರಲ್ಲಿ ಬಂದ ‘ಭೋಜ್‌ಪುರಿಯಾ ಭಯ್ಯಾ’ ಸುದೀಪ್ ಅವರ ಮೊದಲ ಚಿತ್ರ. ಇದರ ನಂತರ ಅವರು ‘ಮಸಿಯಾ ಬಾಬು’, ‘ಹಮರ್ ಸಂಗಿ ಬಜರಂಗಬಲಿ’, ‘ಭೋಜ್‌ಪುರಿಯಾ ದರೋಗಾ’, ‘ಹಮರ್ ಲಾಲ್ಕರ್’, ‘ಹಮ್ ಹೇ ಧರಮ್ ಯೋದ್ಧ’, ‘ಖೂನಿ ದಂಗಲ್’, ‘ಧರ್ತಿ ಕಾ ಬೇಟಾ’ ಮತ್ತು ‘ಹಮರ್ ಸಂಗಿ’ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು.