ಎಳನೀರು ಅತ್ಯಂತ ಸುರಕ್ಷಿತ ಮತ್ತು ಕಲಬೆರಕೆಯಿಲ್ಲದ ಪಾನೀಯ. ಎಳನೀರು ದೇಹವನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಎಳನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಯಕೃತ್ತು ಆರೋಗ್ಯಕರವಾಗಿರುತ್ತದೆ.
ಇದರಲ್ಲಿ ಹೆಚ್ಚು ಪೌಷ್ಟಿಕಾಂಶವಿದೆ ಹಾಗೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿದ ನೈಸರ್ಗಿಕ, ಕಡಿಮೆ ಕ್ಯಾಲೋರಿ ಪಾನೀಯವಾಗಿದೆ. ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಶುರುವಾಗುತ್ತದೆ. ಹಾಗಾಗಿ ಕಡಿಮೆ ನೀರನ್ನು ಕುಡಿಯುತ್ತಿದ್ದರೆ, ಪ್ರತಿನಿತ್ಯ ಒಂದು ಎಳನೀರು ಕುಡಿಯುವುದು ಉತ್ತಮ ಅಭ್ಯಾಸ.
ಎಳನೀರು ನೈಸರ್ಗಿಕ ಎಲೆಕ್ಟ್ರೋಲೈಟ್ ಪಾನೀಯವಾಗಿದ್ದು, ಚಳಿಗಾಲದಲ್ಲಿ ನಮಗೆ ಬಾಯಾರಿಕೆ ಇಲ್ಲದಿರುವಾಗಲೂ ದೇಹವನ್ನು ತೇವಾಂಶದಿಂದ ಇಡುತ್ತದೆ. ಕಡಿಮೆ ಕ್ಯಾಲೋರಿ, ಕೊಬ್ಬಿನಂಶವಿರುವ ಎಳನೀರು ಇತರೆ ಜ್ಯೂಸ್ ಗಳಿಗೆ ಹೋಲಿಸಿದರೆ ಉತ್ತಮ ಪರ್ಯಾಯವಾಗಿದೆ. ಇದು ಚಳಿಗಾಲದ ಅವಧಿಯಲ್ಲಿ ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ.