ಚಿತ್ರದುರ್ಗ: ಸಂಪೂರ್ಣ ಸೊಂಟ ಹಾಗೂ ಮೊಣಕಾಲು ಕೀಲು ಬದಲಾವಣೆ ಶಸ್ತçಚಿಕಿತ್ಸೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ. ಸಂಧ್ಯಾ ಕಾಲದ ಬಡ ರೋಗಿಗಳಿಗೆ ಇದು ವರದಾನವಾಗಲಿದ್ದು, ಅರ್ಹ ಬಿ.ಪಿ.ಎಲ್ ಕಾರ್ಡುದಾರಿಗೆ ಎ.ಬಿ.ಆರ್.ಕೆ ಅಡಿ ಉಚಿತವಾಗಿ ಶಸ್ತç ಚಿಕಿತ್ಸೆ ನಡೆಸಲಾಗುವುದು ಎಂದು ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳಿದರು.
ಈ ಕುರಿತು ಶನಿವಾರ ಜಿಲ್ಲಾ ಆಸ್ಪತ್ರೆ ಬಿ.ಸಿ.ರಾಯ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ವಯಸ್ಸಾದಂತೆ ಹಲವು ಜನರಲ್ಲಿ ಸೊಂಟ ಹಾಗೂ ಮೊಣಕಾಲು ಸವೆತ ಉಂಟಾಗುತ್ತದೆ. ಇದರಿಂದ ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ನಡೆಯಲು ಸಹ ಕಷ್ಟ ಪಡುವವರು, ಶಸ್ತçಚಿಕಿತ್ಸೆಯ ನಂತರ ಸಹಜವಾಗಿ ಓಡಾಟ ನಡೆಸಬಹುದು. ಸೊಂಟ,ಮೊಣಕಾಲು ಜೊತೆ ಬೆನ್ನುಹುರಿ ಶಸ್ತçಚಿಕಿತ್ಸೆಯನ್ನು ಸಹ ಜಿಲ್ಲಾ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುವುದು. ಪ್ರತಿ ಶನಿವಾರ ಅಥವಾ ಸೋಮವಾರದಂದು ನುರಿತ ತಜ್ಞರು ಶಸ್ತçಚಿಕಿತ್ಸಕೆ ನಡೆಸಲಿದ್ದಾರೆ.
ಸೊಂಟ ಹಾಗೂ ಮೊಣಕಾಲು ಕೀಲು ಬದಲಾವಣೆ ಶಸ್ತçಚಿಕಿತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ರೂ.5 ರಿಂದ 6 ಲಕ್ಷದವರೆಗೂ ವೆಚ್ಚವಾಗುತ್ತದೆ. ಅದರೆ ಜಿಲ್ಲಾ ಆಸ್ಪತ್ರೆಯಲ್ಲಿ ಇನ್‌ಪ್ಲಾಂಟ್ಸ್ ಸಹಿತ ಬಿ.ಪಿ.ಎಲ್ ಕಾರ್ಡುದಾರಿಗೆ ಎ.ಬಿ.ಆರ್.ಕೆ ಅಡಿ ಉಚಿತವಾಗಿ ಶಸ್ತç ಚಿಕಿತ್ಸೆ ನಡೆಸಲಾಗುವುದು ಎಂದು ಡಾ.ಎಸ್.ಪಿ.ರವೀಂದ್ರ ತಿಳಿಸಿದರು.
ಬೆಂಗಳೂರಿನ ಪ್ರಖ್ಯಾತ ಕೀಳುಮೂಳೆ ತಜ್ಞ ಡಾ.ವಿಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಸದ್ಯ ಇಬ್ಬರು ರೋಗಿಗಳಿಗೆ ಟೋಟಲ್ ಹಿಪ್ ರೀಪ್ಲೇಸಮೆಂಟ್(ಟಿ.ಹೆಚ್.ಆರ್) ಶಸ್ತçಚಿಕಿತ್ಸೆ ಕೈಗೊಳ್ಳಲು ತಯಾರಿ ನಡೆಸಲಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಶಸ್ತçಚಿಕಿತ್ಸೆಗೆ ಅಗತ್ಯವಾದ ಆಪರೇಷನ್ ಥೆಯಟರ್ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಪ್ರತಿ ತಿಂಗಳು 100 ರಿಂದ 150 ಮೂಳೆ ಸಂಬAಧಿಸಿದ ಶಸ್ತçಚಿಕೆತ್ಸೆಯನ್ನು ನಡೆಸಲಾಗುತ್ತಿದೆ ಎಂದು ಕೀಳುಮೂಳೆ ವಿಭಾಗದ ತಜ್ಞವೈದ್ಯ ಡಾ.ಎಸ್.ಪಿ.ದಿನೇಶ್ ಮಾಹಿತಿ ನೀಡಿದರು. ಇವರೊಂದಿಗೆ ಜಿಲ್ಲಾಸ್ಪತ್ರೆಯ ಕೀಳುಮೂಳೆ ವಿಭಾಗದ ವೈದ್ಯರುಗಳಾದ ಡಾ.ಶ್ರೀಧರ್ ಹಾಗೂ ಡಾ.ಬಸವರಾಜ್ ಶಸ್ತçಚಿಕಿತ್ಸೆಯಲ್ಲಿ ಪಾಲ್ಗೊಳ್ಳಲಿದ್ದಾರೆ.