ಬೆಂಗಳೂರು: ಬಿಸಿ ಸುದ್ದಿ ವಾಹಿನಿ ಬರಲಿರುವ SSLC ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳಿಗಾಗಿ ಅನುಕೂಲವಾಗುವಂತೆ ಇಂಗ್ಲೀಷ್, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಶ್ನೆಪತ್ರಿಕೆಯ ವಿನ್ಯಾಸ, ವಿಷಯವಾರು, ಅಧ್ಯಾಯಗಳ ವಿಶ್ಲೇಷಣೆ ಬಗ್ಗೆ “ಬಿಸಿ ಸುದ್ದಿ” bcsuddi.com ಯ್ಯೂಟ್ಯೂಬ್ ಚಾನಲ್ ನಲ್ಲಿ ಹಲವು ಕಂತುಗಳಲ್ಲಿ ಪ್ರಸಾರವಾಗಲಿದೆ.
ಹಲವು ವಿಭಿನ್ನ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಹೆಚ್ಚಿನ ಅಂಕಗಳನ್ನು ಪಡೆಯಲು ಕಾರ್ಯಕ್ರಮವನ್ನು ರೂಪಿಸಿದೆ.
ಈ ಕಾರ್ಯಕ್ರಮವು ಇದೇ ಜನವರಿ ತಿಂಗಳ 20 ರಿಂದ ಉದ್ಘಾಟನೆಗೊಂಡು, ಸೋಮವಾರ , ಬುಧವಾರ ಹಾಗೂ ಶುಕ್ರವಾರಗಳಂದು ಕ್ರಮವಾಗಿ ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ ವಿಷಯದ ಸಂಚಿಕೆಗಳು ಒಳಗೊಂಡಿದೆ. ಸಂಜೆ 7 ಗಂಟೆಯ ಸಮಯದಲ್ಲಿ ಬಿತ್ತರಗೊಳ್ಳುತ್ತವೆ. ಈ ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕರಾದ H.S.T ಸ್ವಾಮಿ ನಿರೂಪಿಸಲಿದ್ದಾರೆ.