ಲಕ್ನೋ: ಉತ್ತರ ಪ್ರದೇಶದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ವಿಶಿಷ್ಟ ಕಣ್ಣಿನ ಸುಂದರಿ ಮೊನಾಲಿಸಾ ಭೋಸ್ಲೆ (16) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು.
ಇದೀಗ ನೆಟ್ಟಿಗರ ಹಾವಳಿಯಿಂದಾಗಿ ಅವರು ಕುಂಭಮೇಳ ತೊರೆ ದಿದ್ದಾರೆ. ಮಧ್ಯ ಪ್ರದೇಶ ಮೂಲದ ಮೊನಾಲಿಸಾ ರುದ್ರಾಕ್ಷಿ ಮಾಲೆ, ಮಣಿಸರಗಳ ಮಾರಾಟಕ್ಕೆಂದು ಕುಟುಂಬಸ್ಥರೊಂದಿಗೆ ಬಂದಿದ್ದರು. ಆದರೆ ರುದ್ರಾಕ್ಷಿ, ಮಾಲೆ ಖರೀದಿಸಲು ಬರುತ್ತಿದ್ದವರೆಲ್ಲ ಆಕೆ ಜತೆಗೆ ಸೆಲ್ಫಿ, ಫೋಟೋಗೆ ಮುಗಿಬಿದ್ದು, ವ್ಯಾಪಾರಕ್ಕೂ ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಆಕೆಯನ್ನು ಅವರ ತಂದೆ ಮನೆಗೆ ಕಳಿಸಿದ್ದಾರೆಂದು ಆಕೆಯ ತಂಗಿ ಹೇಳಿದ್ದಾರೆ.