ಚಿತ್ರದುರ್ಗ: ಒಂದೇ ಸಮಯದಲ್ಲಿ 6 ಗ್ರಹಗಳನ್ನು ನೋಡುವ ಸದಾವಕಾಶ.! ಇದೇ ಜನವರಿ 21 ರಿಂದ ಫೆಬ್ರವರಿ 2 ರವರೆಗೆ, ಸೂರ್ಯಾಸ್ತದ ನಂತರ ರಾತ್ರಿ 8.30 ರಿಂದ ಈ ಗ್ರಹಗಳ ಪರೇಡ್ ನ್ನು ನೋಡಬಹುದಾಗಿದೆ.
ಪೂರ್ವ ದಿಗಂತದಿಂದ, ಪಶ್ಚಿಮ ದಿಗಂತದವರೆಗೆ ಮಂಗಳ,ಯುರೇನಸ್,ಗುರುಗ್ರಹ, ಶನಿ, ನೆಫ್ಚೂನ್ ಮತ್ತು ಶುಕ್ರಗ್ರಹಗಳ ಓಟವನ್ನು ಬರಿಗಣ್ಣಿನಿಂದಲೇ ನೋಡಬಹುದು. ಇದೊಂದು ಅಪರೂಪದ ಸದಾವಕಾಶ.
ನಿಮ್ಮಲ್ಲಿ ಬೈನಾಕ್ಯೂಲರ್ ಅಥವಾ ದೂರದರ್ಶಕವಿದ್ದಲ್ಲಿ ಯುರೇನಸ್ ಮತ್ತು ನೆಪ್ಚೂನ್ ನ್ನು ನೋಡಿ ಆನಂದಿಸಬಹುದು. ಪಶ್ಚಿಮದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಸಂಜೆಯ ನಕ್ಷತ್ರ. ಅಥವಾ ಬೆಳಗಿನ ನಕ್ಷತ್ರ. ಶುಕ್ರಗ್ರಹವನ್ನು ನೋಡಲು ಉತ್ತಮ ಅವಕಾಶ.! ಬೆಳಗಿನ ಜಾವ ಸೂರ್ಯೋದಯಕ್ಕಿಂತ ಮುಂಚೆ ಬುಧಗ್ರಹವನ್ನು ನೋಡಬಹುದು. ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ. ಸಂಪರ್ಕಕ್ಕಾಗಿ..9448565534