ಕೊಡಗು: ಮೈಸೂರು ಮೂಡಾ ಹಗರಣ ವಿಚಾರದ ಬಗ್ಗೆ ಕೊಡಗು ಮೈಸೂರು ಸಂಸದ ಯದುವೀರ್ ರಿಯಾಕ್ ಮಾಡಿದ್ದು ಮೂಡ ಹಗರಣ ವಿಚಾರದಲ್ಲಿ ಸಮಾಜಕ್ಕೆ ನ್ಯಾಯ ಸಿಗಬೇಕಾಗಿರೋದು.
ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ. ತನಿಖೆ ಆದರೆ ಯಾರೆಲ್ಲಾ ತಪ್ಪು ಮಾಡಿದ್ದಾರೆಂಬೂದು ಹೊರ ಬಂದೆ ಬರುತ್ತೆ. ಅದರಲ್ಲೂ ಮೂಡ ಹಗರಣ ವಿಚಾರದಲ್ಲಜ ಸಿಎಂ ಸಿದ್ದರಾಮಯ್ಯ ಪಾತ್ರ ಪ್ರಮುಖವಾಗಿದೆ ಎನ್ನೋದು ಎದ್ದು ಕಾಣುತ್ತಿದೆ.
ಸೈಟ್ ಹಿಂದಕ್ಕೆ ಕೊಡುವ ಮೂಲಕ ಅವರು ಒಪ್ಪಿಕೊಂಡಿದ್ದಾರೆ.ಸಿಎಂ ರಾಜೀನಾಮೆ ನೀಡಬೇಕು ಎಂಬೂದು ನಮ್ಮ ಪಕ್ಷದ ಆಗ್ರಹ ಇದೆ.ತನಿಖೆ ಆದ ಬಳಿಕ ಏನಾಗುತ್ತೆ ನೋಡೋಣ ಎಂದು ಕೊಡಗಿನ ಗೋಣಿಕೊಪ್ಪದಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಪ್ರತಿಕ್ರಿಯೆ ನೀಡಿದ್ದಾರೆ.