ಚಿತ್ರದುರ್ಗ: ರೆಮ್ಸ್ ತಂತ್ರಾಂಶದಲ್ಲಿ ಹಾಫ್ ರಿಜೆಕಷನ್ ಪರ್ಮಿಟ್ ಕ್ಯಾನ್ಸಲೇಷನ್ ಮಾಡುವಂತೆ ಕೋರಿ ದವಸಧಾನ್ಯ ಖರೀದಿದಾರ ಒಕ್ಕೂಟ ಸಲ್ಲಿಸಿದ್ದ ಮನವಿಗೆ, ಕೃಷಿ ಮಾರಾಟ ಇಲಾಖೆ ನಿದೇರ್ಶಕರು ಸಕಾರಾತ್ಮವಾಗಿ ಸ್ಪಂದಿಸಿ, ಸಮಸ್ಯೆ ಬಗೆಹಿರಿಸುವ ಆಶ್ವಾಸನೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಎಪಿಎಂಸಿಗಳಲ್ಲಿ ಮೆಕ್ಕಜೋಳ ಟೆಂಡರ್ ಹಾಗೂ ಖರೀದಿ ಎಂದಿನAತೆ ನಡೆಯಲಿದೆ. ಜ.24 ರಿಂದ ಕರೆಕೊಡಲಾಗಿದ್ದ ಅನಿರ್ಧಿಷ್ಟಾವಧಿಯವರೆಗೆ ಮೆಕ್ಕಜೋಳ ಮಾರ್ಕೆಟ್ ಬಂದ್ ಹಿಂಪಡೆಯಲಾಗಿದೆ. ರೈತಬಾಂಧವರು ಮಾರುಕಟ್ಟೆಗೆ ಎಂದಿನಂತೆ ಮೆಕ್ಕೆಜೋಳವನ್ನು ಮಾರಾಟಕ್ಕೆ ತರಬಹುದು ಎಂದು ಎಪಿಎಂಸಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.