ಚಿತ್ರದುರ್ಗ : ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ದಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಕಳೆದ 12 ರಂದು ನಡೆದ ಚುನಾವಣೆಯಲ್ಲಿ ಹಿರೇಗುಂಟನೂರು ಕ್ಷೇತ್ರ ಸಿಂಗಾಪುರ ಗ್ರಾಮದ ಕೆ.ಆರ್.ರವಿ, ಶ್ರೀಮತಿ ಪದ್ಮ ಕೆ.ಆರ್.ರವಿ ದಂಪತಿಗಳು ಜಯಶಾಲಿಗಳಾಗಿದ್ದಾರೆ.
ಜಯಶಾಲಿಗಳಾದ ದಂಪತಿಗಳು ಮಂಗಳವಾರ ಪಿ.ಎಲ್.ಡಿ.ಬ್ಯಾಂಕ್ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಅಪಾರ ಅಭಿಮಾನಿಗಳು ದಂಪತಿಗಳಿಗೆ ಶುಭ ಹಾರೈಸಿದರು.