ಚಿತ್ರದುರ್ಗ : ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ನ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ವಾಸವಿ ಮಹಲ್ನಲ್ಲಿ ಸೋಮವಾರ ನಡೆಯಿತು. ರಾಜೇಶ್ವರಿ ಸಿದ್ದರಾಮ್ ಅಧ್ಯಕ್ಷೆಯಾಗಿ ಕಾರ್ಯದರ್ಶಿ ಸವಿತಾ ನಾಗೇಶ್, ಖಜಾಂಚಿಯಾಗಿ ಸತ್ಯನಾರಾಯಣ ಗುಪ್ತ ಪ್ರಮಾಣ ವಚನ ಸ್ವೀಕರಿಸಿದರು. ಗೌರ್ವನರ್ ಅಶೋಕ್ ಪ್ರಮಾಣ ವಚನ ಬೋಧಿಸಿದರು.
ಇಂಟರ್ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ದಿಲೀಪ್, ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಈ.ಶ್ರೀನಿವಾಸ್, ವಾಸವಿ ಕ್ಲಬ್ ಚಿತ್ರದುರ್ಗ ಗೌರವಾಧ್ಯಕ್ಷ ಎಸ್.ಎನ್.ಕಾಶಿವಿಶ್ವನಾಥಶೆಟ್ಟಿ, ರೀಜನಲ್ ಚೇರ್ ಪರ್ಸನ್ ಕೋಟೇಶ್ವರ ಗುಪ್ತ, ಕ್ಯಾಬಿನೆಟ್ ಸೆಕ್ರೆಟರಿ ಕೇಶವ್, ಖಜಾಂಚಿ ಹರೀಶ್, ಕ್ಲಬ್ನ ಕಾರ್ಯಕಾರಿ ಸದಸ್ಯರು, ಆರ್ಯವೈಶ್ಯ ಸಂಘದ ಪದಾಧಿಕಾರಿಗಳು ಪದಗ್ರಹಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.