ನವದೆಹಲಿ : ನಾನು ಪ್ರತಿದಿನ ಬೆಳಗ್ಗೆ 6:20 ಕ್ಕೆ ಆಫೀಸ್‌ಗೆ ಹೋಗಿ ರಾತ್ರಿ 8:30 ಗಂಟೆ ವರೆಗೂ ಕೆಲಸ ಮಾಡುತ್ತಿದ್ದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ತಿಳಿಸಿದ್ದಾರೆ.
ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕೆಂಬ ತಮ್ಮ ಹೇಳಿಕೆ ವಿವಾದಕ್ಕೆ ಗುರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈಗ ಯಾರು ಕೂಡ ಇನ್ನೊಬ್ಬ ವ್ಯಕ್ತಿಯ ಮೇಲೆ ದೀರ್ಘ ಕೆಲಸದ ಸಮಯವನ್ನು ಹೇರಬಾರದು. ಇವು ಚರ್ಚೆಯ ವಿಷಯ ಅಲ್ಲ. ಆತ್ಮಾವಲೋಕನಕ್ಕೆ ಸಂಬಂಧಿಸಿದ ವಿಷಯಗಳು ಎಂದು ಹೇಳಿದ್ದಾರೆ.
ನಾನು 40 ವರ್ಷ ವಯಸ್ಸಿನವನಿದ್ದಾಗ ಇಷ್ಟು ಸಮಯ ಕೆಲಸ ಮಾಡಿದ್ದೇನೆ. ಇದು ಚರ್ಚೆಗೆ ಒಳಪಡಿಸುವ ವಿಷಯ ಅಲ್ಲ. ನಿಮಗೆ ನೀವೇ ತೀರ್ಮಾನ ಮಾಡಬಹುದು. ನೀವು ಬಯಸಿದ್ದನ್ನು ಮಾಡಬಹುದು. ನೀವು ಅದನ್ನು ಮಾಡಬೇಕು, ನೀವು ಅದನ್ನು ಮಾಡಬಾರದು ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಯುವಕರು, ‘ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ’ ಎಂದು ಹೇಳಬೇಕು ಎಂದಿದ್ದರು. ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.