ಮಧ್ಯಪ್ರದೇಶ : ತನ್ನ ಸಿನಿಮಾ ಸೆಲೆಬ್ರಿಟಿಗಳನ್ನು ಮೀರಿಸುವ ಫಿಟ್ನೆಸ್. ಚಿಕ್ಕ ವಯಸ್ಸಿನಲ್ಲೇ ಎಸಿಪಿ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಪ್ರಸ್ತುತ ಮಧ್ಯಪ್ರದೇಶ ಕೇಡರ್ ನಲ್ಲಿ ಕರ್ತವ್ಯದಲ್ಲಿದ್ದಾರೆ. IPS ಸಚಿನ್ ಅತುಲ್ಕರ್ ಯಶಸ್ಸಿನ ಕಥೆ ಇಲ್ಲಿದೆ. IPS ಸಚಿನ್ ಅತುಲ್ಕರ್ ಅವರು 8 ಆಗಸ್ಟ್ 1984 ರಂದು ಜನಿಸಿದ್ದಾರೆ. ಸಚಿನ್ ಅತುಲ್ಕರ್ 2007 ರಲ್ಲಿ ಕೇವಲ 23 ನೇ ವಯಸ್ಸಿನಲ್ಲಿ ಐಪಿಎಸ್ ಅಧಿಕಾರಿಯಾದರು.
ಅವರ ಹೆಸರಿನಲ್ಲಿ ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿ ಎಂಬ ದಾಖಲೆ ಕೂಡ ಇದೆ. ಅವರು ತಮ್ಮ ಫಿಟ್ನೆಸ್ ನಿಂದಲೇ ತನ್ನತ್ತ ಸೆಳೆದ ಅಧಿಕಾರಿ. ಐಪಿಎಸ್ ಸಚಿನ್ ಅತುಲ್ಕರ್ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಅವರು ಅತ್ಯಂತ ಕಿರಿಯ ಡಿಐಜಿ ಎನಿಸಿಕೊಂಡರು. ಪ್ರಸ್ತುತ, ಅವರು ಮಧ್ಯಪ್ರದೇಶದ ರಾಜಧಾನಿಯಾದ ಭೋಪಾಲ್ ನಲ್ಲಿ ಎಸಿಪಿಯಾಗಿ ನಿಯೋಜಿಸಲ್ಪಟ್ಟಿದ್ದಾರೆ. ಇವರನ್ನು ಅತ್ಯಂತ ಸುಂದರ ಪೊಲೀಸ್ ಅಧಿಕಾರಿ ಎಂದು ಕರೆಯಲಾಗುತ್ತದೆ. IPS ಸಚಿನ್ ಅತುಲ್ಕರ್ ಅವರು 2006 ರಲ್ಲಿ UPSC ಪರೀಕ್ಷೆಯಲ್ಲಿ 258 ನೇ ರ್ಯಾಂಕ್ ಗಳಿಸಿದ್ದರು. ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಹಾಜರಾಗುವ ಮೊದಲು ಬಿಕಾಂ ಪದವಿ ಪಡೆದಿದ್ದರು.
ಅವರ ಈವರೆಗಿನ ವೃತ್ತಿಜೀವನದಲ್ಲಿ ಅವರು ಹೆಚ್ಚಿನ ಸಮಯ ಕ್ಷೇತ್ರ ಕರ್ತವ್ಯದಲ್ಲಿದ್ದಾರೆ. ಐಪಿಎಸ್ ಸಚಿನ್ ಅತುಲ್ಕರ್ ಪ್ರತಿದಿನ 1-2 ಗಂಟೆಗಳ ಕಾಲ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾರೆ. ಮನಸ್ಸನ್ನು ಶಾಂತವಾಗಿಡಲು ಯೋಗ ಮತ್ತು ಧ್ಯಾನವನ್ನೂ ಮಾಡುತ್ತಾರೆ. ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ ಎನ್ನಲಾಗುತ್ತದೆ. ಐಪಿಎಸ್ ಸಚಿನ್ ಅತುಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅವರು ಇನ್ ಸ್ಟಾಗ್ರಾಮ್ ನಲ್ಲಿ 10 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಅವರ ಹೆಸರಿನಲ್ಲಿ ಅನೇಕ ಫ್ಯಾನ್ ಪೇಜ್ ಗಳನ್ನು ಕೂಡ ಮಾಡಲಾಗಿದೆ. ಅಲ್ಲದೇ ಸಚಿನ್ ಅತುಲ್ಕರ್ ಅವರಿಗೆ ಎರಡು ಬಾರಿ ‘ಬಿಗ್ ಬಾಸ್’ ಆಫರ್ ಬಂದಿತ್ತು. ಆದರೆ ಅದನ್ನು ಅವರು ತಿರಸ್ಕರಿಸಿದ್ದಾರೆ. ಒಟ್ಟಾರೆ ಒಬ್ಬ ಶಿಸ್ತುಬದ್ಧ ಅಧಿಕಾರಿಯಾಗಿ ಯಶಸ್ಸು ಪಡೆದಿದ್ದಾರೆ.