ಹೈದರಾಬಾದ್: ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಆಕೆಯ ದೇಹವನ್ನು ಕತ್ತರಿಸಿ ಪೀಸ್ ಪೀಸ್ ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಘಟನೆ ಹೈದರಾಬಾದ್ ನ ಮೀರ್ ಪೇಟೆಯಲ್ಲಿ ನಡೆದಿದೆ.ಕೊಲೆಯಾದ ಮಹಿಳೆಯನ್ನು ವೆಂಕಟ ಮಾಧವಿ(35) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ನಿವೃತ್ತ ಯೋಧ ಗುರುಮೂರ್ತಿ ಕೊಲೆ ಮಾಡಿದ ಆರೋಪಿ.
ಗುರುಮೂರ್ತಿ ಹಾಗೂ ಮಾಧವಿ ಹದಿಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು ದಂಪತಿಗೆ ಇಬ್ಬರು ಮಕ್ಕಳು, ಇತ್ತೀಚಿಗೆ ಕೆಲ ವರ್ಷದ ಹಿಂದೆ ಕುಟುಂಬ ಜಿಲ್ಲಾಲಗುಡ ನ್ಯೂ ವೆಂಕಟೇಶ್ವರ ಕಾಲನಿಯಲ್ಲಿ ಬಾಡಿಗೆ ಮಾಡಿಕೊಂಡು ವಾಸವಾಗಿದ್ದಾರೆಗುರುಮೂರ್ತಿ, ಮಾಜಿ ಸೈನಿಕ, ಪ್ರಸ್ತುತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಉದ್ಯೋಗಿಯಾಗಿದ್ದಾರೆ.