ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ರಾಜ್ಯದಲ್ಲಿ ನಾಳೆಯಿಂದ (ಜನವರಿ 27 ರಂದು) ಜಾರಿಗೆ ಬರಲಿದೆ. ಉತ್ತರಾಖಂಡವು, ಈ ಕಾನೂನನ್ನು ಕಾರ್ಯರೂಪಕ್ಕೆ ತಂದ ಮೊದಲ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಕಾನೂನು ಜಾರಿಗೆ ಸಂಬಂಧಿಸಿದ ಎಲ್ಲ ನಿಯಮಗಳಿಗೆ ಅನುಮೋದನೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿ ನೀಡುವುದೂ ಸೇರಿದಂತೆ ಯುಸಿಸಿ ಅನುಷ್ಠಾನಗೊಳಿಸಲು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.