ಮಹಾರಾಷ್ಟ್ರ: ಹಣ ಇಲ್ಲದಿದ್ದರೆ ಯಾರು ಸಹ ತಮ್ಮ ಕನಸನ್ನು ಫುಲ್‌ಫಿಲ್ ಮಾಡಿಕೊಳ್ಳಲು ಆಗುವುದಿಲ್ಲ ಎನ್ನುವುದನ್ನು ಕೇಳಿರುತ್ತೀರಾ. ಆದರೆ ತಮ್ಮ ಕನಸು ನನಸು ಮಾಡಿಕೊಳ್ಳಲು ಕೆಲವರಿಗೆ ಹಣ ಬೇಡ ಎಂಬುದನ್ನು ಸಾಭೀತು ಮಾಡಿರುವವರು ಇದ್ದಾರೆ. ಅದಕ್ಕೆ ಸಾಕ್ಷಿ ಐಎಎಸ್ ಅಧಿಕಾರಿ ಡಾ ರಾಜೇಂದ್ರ ಭರುದ್.
ಡಾ ರಾಜೇಂದ್ರ ಭರುದ್ ರವರು ಮಹಾರಾಷ್ಟ್ರ ಮೂಲದ ಸಕ್ರಿ ತಾಲೂಕಿನ ಸಮೊಡೆ ಗ್ರಾಮದವರು. ಎಂಬಿಬಿಎಸ್ ಪಾಸ್ ಮಾಡಿದ ನಂತರ ಅವರ ಗ್ರಾಮಕ್ಕೆ ಬಂದ ಡಾ ರಾಜೇಂದ್ರ ಭರುದ್ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಇವರು ಕೇವಲ ಡಾಕ್ಟರ್ ಆಗಿ ಮಾತ್ರವಲ್ಲದೇ ಐಎಎಸ್ ಅಧಿಕಾರಿಯಾಗಿ ಮನೆಗೆ ಬಂದಿದ್ದರು.
ಡಾ ರಾಜೇಂದ್ರ ಭರುದ್ 1988 ರ ಜನವರಿ 7 ರಲ್ಲಿ ಸಮೊಡೆ ಗ್ರಾಮದಲ್ಲಿ ಜನಿಸಿದವರು. ದುರದೃಷ್ಟವಶಾತ್ ಇವರ ಜನನದ ಮೊದಲೇ ಅವರ ತಂದೆ ದೈವಾದೀನರಾಗಿದ್ದರು. ಇವರ ಕುಟುಂಬ, ತಂದೆಯ ಒಂದೇ ಒಂದು ಭಾವಚಿತ್ರವನ್ನು ಸಹ ಹೊಂದಿರಲಿಲ್ಲ. ಇದಕ್ಕೆಲ್ಲ ಕಾರಣ ಕಡು ಬಡತನ, ಅರ್ಥಿಕ ಪರಿಸ್ಥಿತಿಯೇ ಹೊರತು ಬೇರೇನು ಅಲ್ಲ. ತಾಯಿ ಜೀವನಾಂಶಕ್ಕಾಗಿ ಮದ್ಯಪಾನ ಮಾರಾಟ ಮಾಡುತ್ತ, ಇಡೀ ಕುಟುಂಬ ಒಂದು ಕಬ್ಬಿನ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದರು.
ಡಾ ರಾಜೇಂದ್ರ ಭರುದ್ ತಮ್ಮ ಮೂರನೇ ವಯಸ್ಸಿನಲ್ಲಿ ಹಸವಿನಿಂದ ಹೆಚ್ಚು ಅಳುತ್ತಿದ್ದರಂತೆ. ಇವರ ಅಳು ನಿಲ್ಲಿಸಲು ಇವರಿಗೆ ಮದ್ಯಪಾನದ ಡ್ರಾಪ್ಸ್ ಹಾಕಲಾಗುತ್ತಿತ್ತಂತೆ. ಆಗ ಅಳು ನಿಲ್ಲಿಸುತ್ತಿದ್ದರು ಎಂದು ಸಂದರ್ಶನವೊಂದರಲ್ಲಿ ಸ್ವತಃ ಡಾ ರಾಜೇಂದ್ರ ಭರುದ್ ಹೇಳಿಕೊಂಡಿದ್ದಾರೆ.
ಇವರು ಮನೆಯ ಹೊರಗೆ ಕುಳಿತು ಬೀದಿ ದೀಪದ ಸಹಾಯದಿಂದ ಓದುತ್ತಿದ್ದರಂತೆ. ಈ ಸಂದರ್ಭದಲ್ಲಿ ಮದ್ಯಪಾನಕ್ಕಾಗಿ ಬರುತ್ತಿದ್ದವರು ಸ್ನ್ಯಾಕ್ಸ್ ನೀಡಿದ ಹಣದಲ್ಲಿ ಇವರು ತಮಗೆ ಬೇಕಾದ ಪುಸ್ತಕಗಳನ್ನು ಖರೀದಿಸುತ್ತಿದ್ದರಂತೆ. ಕಷ್ಟಪಟ್ಟು ಓದಿ ಎಸ್‌ಎಸ್‌ಎಲ್‌ಸಿ ನಲ್ಲಿ ಶೇಕಡ.95 ಅಂಕಗಳನ್ನು ಗಳಿಸಿದ್ದರಂತೆ. ಇನ್ನು ದ್ವಿತೀಯ ಪಿಯುಸಿ ಅಲ್ಲಿ ಶೇಕಡ.90 ಅಂಕಗಳನ್ನು ಗಳಿಸಿದ್ದರು.
ಡಾ ರಾಜೇಂದ್ರ ಭರುದ್ 2006 ರಲ್ಲಿ ಮೆಡಿಕಲ್ ಎಂಟ್ರ್ಯಾನ್ಸ್ ಪರೀಕ್ಷೆ ಬರೆದು ಪಾಸಾದರು. ಮುಂಬೈ ಕೆಇಎಂ ಹಾಸ್ಪಿಟಲ್ ಅಂಡ್ ಸೆಂಟ್ ಜಿಎಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದರು. ಅಲ್ಲದೇ ಈ ಪದವಿ ಪಡೆಯುವಾಗ ಬೆಸ್ಟ್ ಸ್ಟೂಡೆಂಟ್ ಪ್ರಶಸ್ತಿಯನ್ನು ಇಲ್ಲಿ ಪಡೆದವರು. ಮಹಾರಾಷ್ಟ್ರದ ಡಿಪಾರ್ಟ್‌ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ಅಂಡ್ ಡಿಸ್ಟ್ರಿಕ್ಟ್‌ಗೆ ಒಬ್ಬ ಸ್ಪೂರ್ತಿದಾಯಕ ವ್ಯಕ್ತಿಯಾಗಿ ಹೊರಹೊಮ್ಮಿದವರು.
ಡಾ ರಾಜೇಂದ್ರ ಭರುದ್ ಅಂತಿಮ ವರ್ಷದ ಎಂಬಿಬಿಎಸ್ ಓದುವಾಗಲೇ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂದುಕೊಂಡಿದ್ದರು. ಒಂದೇ ಸಮಯದಲ್ಲಿ ಎರಡೆರಡು ಪರೀಕ್ಷೆಗೆ ಓದುವ ಚಾಲೆಂಜ್ ಅನ್ನು ಎದುರಿಸಲು ಸಿದ್ಧರಾದ ಇವರು, ತಮ್ಮ ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸಾದರು. ಏಕಕಾಲದಲ್ಲಿ ಎಂಬಿಬಿಎಸ್ ಡಿಗ್ರಿ, ತರಬೇತಿ ಜತೆಗೆ, ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದು ಪಾಸಾಗಿದ್ದು ಎಲ್ಲರನ್ನು ಆಶ್ಚರ್ಯ ಪಡುವಂತೆ ಮಾಡಿದ್ದರು.
ಮಸ್ಸೂರಿ’ಯಲ್ಲಿ ತರಬೇತಿ ಪಡೆದರು. ನಂತರ 2015 ರಲ್ಲಿ Nanded ಜಿಲ್ಲೆಯ ಅಸಿಸ್ಟಂಟ್ ಕಲೆಕ್ಟರ್ ಮತ್ತು ಪ್ರಾಜೆಕ್ಟ್ ಆಫೀಸರ್ ಆಗಿ ಪೋಸ್ಟಿಂಗ್ ಪಡೆದರು. 2017 ರಲ್ಲಿ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಸೋಲಾರ್‌ಪುರ್‌ಗೆ ನೇಮಕವಾಗಿದ್ದರು. ನಂತರ 2018 ರಲ್ಲಿ ನಂದುರ್‌ಬಾರ್ ನ ಕಲೆಕ್ಟರ್ ಆಗಿ ನೇಮಕವಾದರು.