ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ: ಈಗ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 5 ಲಕ್ಷ ರೂ.ವರೆಗೆ ಸಾಲ ಸಿಗಲಿದೆ.
ಬೇಳೆಕಾಳುಗಳಲ್ಲಿ ಉತ್ಕರ್ಷ: ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆಯತ್ತ ಗಮನ ಹರಿಸಲಾಗುವುದು. ರೈತರು ಹೆಚ್ಚು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ರೈತರು ಬೆಳೆ ಉತ್ಪಾದನೆಯನ್ನು ಹೆಚ್ಚಿಸಿದಾಗ ಸರ್ಕಾರ ಖರೀದಿಗೆ ಸಹಾಯ ಮಾಡುತ್ತದೆ.
ಬಿಹಾರ ಮಖಾನ ಮಂಡಳಿ: ಬಿಹಾರಕ್ಕೆ ಬಂಪರ್ ಗಿಫ್ಟ್ ಘೋಷಣೆ ಮಾಡಿದ್ದು, ಬಿಹಾರ ಮಖಾನ ಮಂಡಳಿ ಸ್ಥಾಪಿಸುವುದಾಗಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು. ಈ ಮಂಡಳಿಯು ಮಖಾನಾ ರೈತರಿಗೆ ನೆರವು ನೀಡಲಿದೆ.
ಮೀನುಗಾರಿಕೆಗೆ ಒತ್ತು: ಸುಸ್ಥಿರ ಮೀನುಗಾರಿಕೆಗೆ ಉತ್ತೇಜನ ನೀಡಲಾಗುವುದು. ಮೀನುಗಾರಿಕೆ ಉದ್ಯಮದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಸಮುದ್ರ ಆಹಾರದ ಮೌಲ್ಯ 6೦ ಸಾವಿರ ಕೋಟಿ ರೂ. ಅಂಡಮಾನ್ ಮತ್ತು ನಿಕೋಬಾರ್ ಮೇಲೆ ವಿಶೇಷ ಗಮನ ಹರಿಸುವುದರೊಂದಿಗೆ ಸುಸ್ಥಿರ ಮೀನುಗಾರಿಕೆಯನ್ನು ಉತ್ತೇಜಿಸುತ್ತದೆ.