ಬೆಳಿಗ್ಗೆ ಎದ್ದ ತಕ್ಷಣ ಭೂಮಿತಾಯಿ ಹಾಗೂ ಸೂರ್ಯನಿಗೆ ನಮಸ್ಕರಿಸಬೇಕು. ಹಾಗೆ ತುಳಸಿ ಗಿಡಕ್ಕೂ ಕೂಡ ನಮಸ್ಕರಿಸಬಹುದು.
ಇದರಿಂದ ಒಳ್ಳೆದಾಗುತ್ತದೆ ಎಂದು ಹೇಳುತ್ತಾರೆ. ಹಾಗೇ ಅಗ್ನಿ, ಜಲವನ್ನು ನೋಡಿದರೆ ಆ ದಿನ ಒಳ್ಳೆದಾಗುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಅಂಗೈ ನೋಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಪ್ರಾಣಿಗಳ ಅದರಲ್ಲೂ ಕ್ರೂರ ಪ್ರಾಣಿಗಳ ಪೋಟೋವನ್ನು ನೋಡಬಾರದು ಎಂದುಹೇಳುತ್ತಾರೆ.
ಆದರೆ ಗೋವಿನ ಮುಖ ನೋಡಬಹುದು. ಇದರಿಂದ ಅಷ್ಟದೇವತೆಗಳ ದರ್ಶನ ಮಾಡಿದ ಪುಣ್ಯ ದೊರಕುತ್ತದೆಯಂತೆ.