ನವದೆಹಲಿ: ರಾಷ್ಟ್ರಪತಿ ಭವನ ಇದೇ ಮೊದಲ ಬಾರಿ ಮದುವೆ ಸಮಾರಂಭಕ್ಕೆ ಸಜ್ಜಾಗುತ್ತಿದೆ. ರಾಷ್ಟ್ರಪತಿ ಭವನದ ಪಿಎಸ್ಓ ಆಗಿರುವ ಸಿಆರ್ಪಿಎಫ್ ಅಸಿಸ್ಟಂಟ್ ಕಮಾಂಡೆಂಟ್ ಪೂನಂ ಗುಪ್ತಾಗೆ ಇಂತಹ ಅದೃಷ್ಟ ಒಲಿದುಬಂದಿದೆ.
ಇಲ್ಲಿನ ಮದರ್ ಥೆರೆಸಾ ಕ್ರೌನ್ ಕಾಂಪ್ಲೆಕ್ಸ್ನಲ್ಲಿ ಫೆಬ್ರವರಿ 12ರಂದು ನಡೆಯುವ ಮದ್ದೆಗೆ ರಾಷ್ಟ್ರಪತಿ ದೌಪದಿ ಮುರ್ಮು ವಿಶೇಷ ಅನುಮತಿ ನೀಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸಿಆರ್ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಅವನೀಶ್ ಜೊತೆ ಪೂನಂ ಗುಪ್ತಾ ಮದ್ವ ನಿಗದಿ ಆಗಿದೆ. ಮಧುವೆಯಲ್ಲಿ ಸಂಬಂಧಿಕರು, ಸ್ನೇಹಿತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪೂನಂ ಗುಪ್ತಾ ಯಾರು?
ಪ್ರಸ್ತುತ ರಾಷ್ಟ್ರಪತಿ ಭವನದಲ್ಲಿ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ (ಪಿಎಸ್ಒ) ಸೇವೆ ಸಲ್ಲಿಸುತ್ತಿರುವ ಪೂನಂ ಗುಪ್ತಾ 74ನೇ ಗಣರಾಜ್ಯೋತ್ಸವ ಪರೇಡ್ನಲ್ಲಿ ಸಂಪೂರ್ಣ ಮಹಿಳಾ ತುಕಡಿಯನ್ನು ನಿರ್ವಹಿಸಿದ್ದರು.
ಗಣಿತಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪೂನಂ ಗ್ವಾಲಿಯರ್ನ ಜಿವಾಜಿ ವಿಶ್ವವಿದ್ಯಾಲಯದಿಂದ BEd ಪದವಿ ಪಡೆದುಕೊಂಡಿದ್ದಾರೆ. 2018ರ ಯುಪಿಎಸ್ಸಿ ಸಿಆರ್ಪಿಎಫ್ ಪರೀಕ್ಷೆಯಲ್ಲಿ 81ನೇ ಬ್ಯಾಂಕ್ ವಿಜೇಯರಾಗಿದ್ದರು. ಬಿಹಾರದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದ ಪೂನಂ ಆ ಬಳಿಕ ಕಠಿಣ ಪ್ರದೇಶಗಳಲ್ಲೂ ತಮ್ಮ ಕರ್ತವ್ಯ ನಿಷ್ಠೆ ಮೆರೆದು ಸೈ ಎನಿಸಿಕೊಂಡಿದ್ದರು.
ಸೋಷಿಯಲ್ ಮೀಡಿಯಾದಲ್ಲೂ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಪೂನಂ, ಆಗಾಗ್ಗೆ ಮಹಿಳಾ ಸಬಲೀಕರಣ ಹಾಗೂ ಸ್ಫೂರ್ತಿದಾಯಕ ಸಂದೇಶಘಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಜೊತೆಗೆ ಸಾರ್ವಜನಿಕರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ.
ನವದೆಹಲಿ: ರಾಷ್ಟ್ರಪತಿ ಭವನ ಇದೇ ಮೊದಲ ಬಾರಿ ಮದುವೆ ಸಮಾರಂಭಕ್ಕೆ ಸಜ್ಜಾಗುತ್ತಿದೆ. ರಾಷ್ಟ್ರಪತಿ ಭವನದ ಪಿಎಸ್ಓ ಆಗಿರುವ ಸಿಆರ್ಪಿಎಫ್ ಅಸಿಸ್ಟಂಟ್ ಕಮಾಂಡೆಂಟ್ ಪೂನಂ ಗುಪ್ತಾಗೆ ಇಂತಹ ಅದೃಷ್ಟ ಒಲಿದುಬಂದಿದೆ. ಇಲ್ಲಿನ ಮದರ್ ಥೆರೆಸಾ ಕ್ರೌನ್ ಕಾಂಪ್ಲೆಕ್ಸ್ನಲ್ಲಿ ಫೆಬ್ರವರಿ 12ರಂದು ನಡೆಯುವ ಮದ್ದೆಗೆ ರಾಷ್ಟ್ರಪತಿ ದೌಪದಿ ಮುರ್ಮು ವಿಶೇಷ ಅನುಮತಿ ನೀಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸಿಆರ್ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಅವನೀಶ್ ಜೊತೆ ಪೂನಂ ಗುಪ್ತಾ ಮದ್ವ ನಿಗದಿ ಆಗಿದೆ. ಮಧುವೆಯಲ್ಲಿ ಸಂಬಂಧಿಕರು, ಸ್ನೇಹಿತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.