ಹರಿಯಾಣ : ಯುಪಿಎಸ್ಸಿಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಪಿಎಸ್ ಅಧಿಕಾರಿಯಾದ ಪೂಜಾ ಯಾದವ್ ಅವರ ಯಶೋಗಾಥೆ ಇದು.
ಹರಿಯಾಣದ ಸೋನಿಪತ್ನಲ್ಲಿ ಮಧ್ಯಮ ಆದಾಯದ ಕುಟುಂಬದಲ್ಲಿ ಜನಿಸಿದ ಪೂಜಾ ತಮ್ಮ ಶಾಲಾ ಶಿಕ್ಷಣವನ್ನು ತಮ್ಮ ಊರಿನಲ್ಲಿ ಪೂರ್ಣಗೊಳಿಸಿದರು. ಅವರು ಬಯೋಟೆಕ್ನಾಲಜಿಯಲ್ಲಿ ಬಿ.ಟೆಕ್ ಮತ್ತು ನಂತರ ಫುಡ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಎಂ.ಟೆಕ್ ಮಾಡಿದರು. ತಮ್ಮ ಅಧ್ಯಯನವನ್ನು ಮುಗಿಸಿದ ನಂತರ, ಪೂಜಾ ತಮ್ಮ ವೃತ್ತಿಜೀವನವನ್ನು ಮುನ್ನಡೆಸಲು ವಿದೇಶಕ್ಕೆ ತೆರಳಿದರು, ಸ್ವಲ್ಪ ಕಾಲ ಜರ್ಮನಿ ಮತ್ತು ಕೆನಡಾದಲ್ಲಿ ಕೆಲಸ ಮಾಡಿದರು.
ಆದರೆ ಪೂಜಾ ಅವರಿಗೆ ತಮ್ಮ ದೇಶಕ್ಕೆ ಕೊಡುಗೆ ನೀಡುವ ಪ್ರಬಲವಾದ ಬಯಕೆಯನ್ನು ಹೊಂದಿದ್ದರು. ಈ ಬಯಕೆಯೇ ಅವರನ್ನು ಭಾರತಕ್ಕೆ ಮರಳಿ ಕರೆತಂದಿತು ಮತ್ತು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದರು.
ಪೂಜಾ ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವ ವೇಳೆ ಪಾರ್ಟ್ ಟೈಮ್ ರಿಸೆಪ್ಶನಿಸ್ಟ್ ಆಗಿ ಹಾಗೂ ಟ್ಯೂಷನ್ ಹೇಳಿಕೊಡುತ್ತಿದ್ದರು. ಮೊದಲ ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. ಬಳಿಕ 2018ರಲ್ಲಿ ಮತ್ತೆ ಪರೀಕ್ಷೆ ಬರೆದ ಅವರು 174ರ್ಯಾಂಕ್ ಪಡೆಯುವ ಮೂಲಕ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ.