ಈ ಕಾರಣಕ್ಕೆ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ…!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ:  ಸೂರ್ಯ ತನ್ನ ದಿಕ್ಕನ್ನ ಬದಲಿಸುವ ಕ್ರಮಕ್ಕೆ ರಥಸಪ್ತಮಿ ಎಂದು. ಈ ಅವಧಿಯಲ್ಲಿ ಸೂರ್ಯ ತನ್ನ ಪ್ರಖರತೆಯನ್ನು ಹೆಚ್ಚಿಸುವ ಕಾರಣ ಶಾಖ ಹೆಚ್ಚಾಗಿರುತ್ತದೆ. ಈ ಕಾರಣ ರಥಸಪ್ತಮಿಗೆ ವೈಜ್ಞಾನಿಕ ಜತೆಗೆ ಪುರಾಣಗಳ ಉಲ್ಲೇಖಗಳು ಉಂಟು ಎಂದು  ಯೋಗಾಚಾರ್ಯ ಎಲ್.ಎಸ್ .ಚಿನ್ಮಯಂದ ಅವರು ಅಭಿಪ್ರಾಯಪಟ್ಟರು

ಜಿಲ್ಲಾ ಯೋಗ ಸಂಸ್ಥೆ ,ಚಿತ್ರದುರ್ಗ,  ಚಿತ್ರದುರ್ಗ ರೋಟರಿ ಕ್ಲಬ್ ಫೋರ್ಟ್ ,ಇನ್ನರ್ವಿಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಚಿತ್ರದುರ್ಗ  ವೀರಶೈವ ಸಮಾಜ  ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ನೀಲಕಂಠೇಶ್ವರ ಸ್ವಾಮಿ ಸಮುದಾಯವನಲ್ಲಿ ಇಂದು ಬೆಳಗ್ಗೆ 5-30ರಿಂದ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರವನ್ನು  ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಪ್ರಸ್ತುತ ದಿನದ ವಿಷಯ ಕುರಿತು ಮಾತನಾಡುತ್ತಾ ರಥಸಪ್ತಮಿಯನ್ನು ಅಚಲ ಸಪ್ತಮಿ, ಮಾಘಸಪ್ತಮಿ ಅಥವಾ ಸೂರ್ಯ ಸಪ್ತಮಿ ಎಂದು ಕರೆಯುವರು. ಬಹು ಹಿಂದಿನಿಂದ ಆಚರಿಸಿಕೊಂಡು ಬಂದಿರುವುದು ಒಂದು ವಿಶೇಷ.

ನಮ್ಮ ರಾಷ್ಟ್ರದಲ್ಲಿ ಅಲ್ಲದೆ ಜಗತ್ತಿನ ಅನೇಕ ಭಾಗಗಳಲ್ಲಿಯೂ ರಥಸಪ್ತಮಿಯನ್ನು ಆಚರಿಸುವರು. 108 ನಾಮ ಜಪ ಅಲ್ಲದೆ ವಿಶೇಷವಾಗಿ ಯೋಗ ಸಾಧಕರು 108 ಸೂರ್ಯ ನಮಸ್ಕಾರಗಳನ್ನು ಸಾಮೂಹಿಕವಾಗಿ ಆಚರಿಸುತ್ತಾರೆ.

ಸೂರ್ಯನು ಆರೋಗ್ಯದಾತ ಎಂದು ವೇದ ಅಲ್ಲದೆ ಪುರಾಣಗಳು ಸಹ ಸೂರ್ಯನನ್ನು ರೋಗನಿವಾರಕನೆಂದು ಸಾರಿವೆ. ಸರ್ವವ್ಯಾಧಿಗಳು, ಮಹಾವ್ಯಾಧಿಗಳು ನಿವಾರಣೆಯಾಗುತ್ತದೆ ಎಂದು  ಜನರಲ್ಲಿ ನಂಬಿಕೆ .ಸೂರ್ಯ ನಮಸ್ಕಾರಗಳಿಂದ

ಬಲಸಂವರ್ಧನೆ ,ಆರೋಗ್ಯ,ಆಯುಷ್ಯಾಭಿವೃದ್ದಿ. ಮನಃಶಕ್ತಿಸಂಚಯ, ಪ್ರಸನ್ನತೆ, ಉತ್ಸಾಹ, ಉಲ್ಲಾಸ ಮನಸ್ಸಿಗೆ ಆಗುತ್ತದೆ ಎಂಬುದಾಗಿ ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಯೋಗ ಸಂಸ್ಥೆಯ ಅಧ್ಯಕ್ಷರಾದ ಎಸ್.ಜಿ .ರಂಗನಾಥ್ ಅವರು ಮಾತನಾಡಿ ನಮ್ಮಲ್ಲಿನ ಅಂತಃಶಕ್ತಿಯನ್ನು ಅರಿಯಲು,ಉದ್ದೀಪನಗೊಳಿಸಲು ಯೋಗ ಸಹಕಾರಿ. ಈ ಬಗ್ಗೆ ಇನ್ನೂ ಹೆಚ್ಚಿನ ಅರಿವನ್ನು ತಿಳಿಯಲು ನಾನು  ಅಭ್ಯಾಸ ಮಾಡುತ್ತಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಇನ್ನರ್ ವೀಲ್ ಕ್ಲಬ್ ಪೋರ್ಟ್ ನ ಅಧ್ಯಕ್ಷಿಣಿ ಶ್ರೀಮತಿ ಲಕ್ಷ್ಮಿ ಮಹೇಶ್ ಅವರು  ಸಂದರ್ಭ ಕುರಿತು ಮಾತನಾಡಿದರು.

ಚಿತ್ರದುರ್ಗ ನಗರದ ವಿವಿಧ ಬಡಾವಣೆಯ ಯೋಗ ತರಬೇತುದಾರರು ಮತ್ತು ಯೋಗಭ್ಯಾಸಿಗಳು ಸೇರಿದಂತೆ  ಸುಮಾರು ನೂರಾರು ಜನ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ 108 ನಮಸ್ಕಾರಗಳನ್ನು 45 ನಿಮಿಷದಲ್ಲಿ ಮುಗಿಸಿದವರು ಹಲವರು. ಅವರಲ್ಲಿ ವಿಮಲಾಕ್ಷಿ, ರುಕ್ಮಿಣಿ ,ಹೇಮಲತಾ ,ಅನುಸೂಯ, ವೀರಭದ್ರಸ್ವಾಮಿ, ಸಂಪತ್ ಕುಮಾರ್, ವಿನಾಯಕ, ದಿವ್ಯಾ, ವೆಂಕಟೇಶ್, ನೇತ್ರಾ, ಅವನಿ, ಶ್ರೀದೇವಿ, ನಿರ್ಮಲ, ಪರಶುರಾಮ್, ತನುಜಾ ,ಲಕ್ಷ್ಮಿ ,ವನಜಾಕ್ಷಿ ,ಭಾಗ್ಯಮ್ಮ ,ಮೋಹನ್, ವಿಜಯಕುಮಾರ್, ಕುಸುಮ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನ ಮಾಡಿದ್ದು ವಿಶೇಷವಾಗಿತ್ತು.

ಸಮಾರಂಭದ ಆರಂಭಕ್ಕೆ ಶಂಭುಲಿಂಗಪ್ಪ ಪ್ರಾರ್ಥನೆಯ  ಮಾಡಿದರು.  ಶಿಕ್ಷಣ ಇಲಾಖೆಯ ಸಂಪತ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ರೊಟೇರಿಯನ್ ಟಿ. ವೀರಭದ್ರಸ್ವಾಮಿ ಶರಣು ಸಮರ್ಪಣೆ ಮಾಡಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon