ಬೆಸ್ಕಾಂ (BESCOM) ಖಾಲಿಯಿರುವ 510 ಹುದ್ದೆಗಳಿಗೆ (Job) ಅರ್ಜಿ (Application) ಆಹ್ವಾನಿಸಿದೆ. ಹಾಗಾದರೆ, ಅರ್ಜಿ ಸಲ್ಲಿಸಬಯಸುವವರು ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (Bangalore Electricity Supply Company Limited) ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ. ಇಲ್ಲಿ ಪ್ರಸ್ತುತ ಅಗತ್ಯ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಡಿಪ್ಲೋಮಾ, ಬಿಇ, ಬಿ.ಟೆಕ್, ಬಿಎ, ಇತರೆ ಯಾವುದೇ ಡಿಗ್ರಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆವಾರು ವಿದ್ಯಾರ್ಹತೆ ವಿವರ
ಟೆಕ್ನಿಕಲ್ ಗ್ರಾಜುಯೇಟ್ಸ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಬಿ.ಇ. / ಬಿ.ಟೆಕ್ – ಇ ಅಂಡ್ ಇ ಇಂಜಿನಿಯರಿಂಗ್ ಟೆಕ್ನಿಕಲ್ ಕೋರ್ಸ್‌ಗಳನ್ನು ಮಾಡಿರಬೇಕಾಗುತ್ತದೆ. ನಾನ್ ಇಂಜಿನಿಯರಿಂಗ್ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್, (ಇ&ಇ ಇಂಜಿನಿಯರಿಂಗ್ ಹೊರತುಪಡಿಸಿ) ಪದವಿಗಳನ್ನು ಪಾಸ್ ಮಾಡಿರಬೇಕು. ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಯಾವುದೇ ಬ್ರ್ಯಾಂಚ್‌ನಲ್ಲಿ ಡಿಪ್ಲೋಮಾ ಉತ್ತೀರ್ಣರಾಗಿರಬೇಕು.
ಅಭ್ಯರ್ಥಿಗಳಿಗೆ 01 ವರ್ಷ ತರಭೇತಿ ನೀಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ ಫೆಬ್ರವರಿ 1ರಿಂದ ಆರಂಭವಾಗಲಿದ್ದು, ಕೊನೇ ದಿನಾಂಕ ಫೆಬ್ರವರಿ 20 ಆಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಇಂಜಿನಿಯರಿಂಗ್ ಪದವೀಧರರು, ಇತರೆ ತಾಂತ್ರಿಕೇತರ ವಿಷಯಗಳ ಪದವೀಧರರು, ಡಿಪ್ಲೊಮಾ ಈ ಎಲ್ಲಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು 2020ರ ನಂತರ ಹುದ್ದೆಗಳಿಗೆ ಸಂಬಂಧಿತ ಶಿಕ್ಷಣಗಳನ್ನು ಪಡೆದಿರಬೇಕು.
ಎಲ್ಲಾ ಗ್ರಾಜುಯೇಟ್ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಬಿಇ/ ಬಿಟೆಕ್ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಟೆಕ್ನಿನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಡಿಪ್ಲೊಮಾ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಬೆಸ್ಕಾಂ ನೇಮಕಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷಗಳು. ನೇಮಕಾತಿ ನಿಯಮದಂತೆ ವಯೋಮತಿ ಸಡಿಲಿಕೆ ಇರುತ್ತದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧಿಕೃತ ವೆಬ್‌ಸೈಟ್ https://bescom.karnataka.gov.inಗೆ ಭೇಟಿ ನೀಡಬಹುದಾಗಿದೆ. ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಮೂಲ ದಾಖಲೆಗಳ ಪರಿಶೀಲನೆ ವಿಳಾಸ BESCOM, HRD Centre, 1st Floor, Crescent Tower, Crescent Road, Near Mallige Nursing Home, Race Course, Bangalore 560001 ಆಗಿದೆ.
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 20, 2025.
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಅಪ್ರೆಂಟಿಸ್ ಹುದ್ದೆಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತದ ವೆಬ್‌ಸೈಟ್ ವಿಳಾಸ : https://bescom.org
ಬೆಸ್ಕಾಂ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವೆಬ್ ವಿಳಾಸ : https://nats.education.gov.in/