ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ದೈನಿಕ ಭಾಸ್ಕರ್ ಸಮೀಕ್ಷೆಯಂತೆ ದೆಹಲಿಯಲ್ಲಿ ಮತ್ತೊಮ್ಮೆ ಆಮ್ ಆದ್ಮಿ ಪಕ್ಷಕ್ಕೆ ಜನರು ಸರ್ಕಾರ ರಚಿಸುವ ಅವಕಾಶ ನೀಡಲಿದ್ದಾರೆ. ಆದರೆ, ಮ್ಯಾಟ್ರಿಜ್ ಸಮೀಕ್ಷೆ, ಪೀಪಲ್ ಇನ್ಸೈಟ್, ಪೀಪಲ್ ಪಲ್ಸ್, ಡಿವಿ ರಿಸರ್ಚ್, ಚಾಣಕ್ಯ ಸ್ಟ್ರಾಟಜಿ ಪ್ರಕಾರ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗಲಿದೆ. 27 ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಪುನರಾಗಮನ ಮಾಡಲಿದೆ ಎಂದು ಬಹುತೇಕ ಸಮೀಕ್ಷೆದಾರರು ಭವಿಷ್ಯ ನುಡಿದಿದ್ದಾರೆ. ಈ ರೇಸ್ನಲ್ಲಿ ಎಎಪಿ ಎರಡನೇ ಸ್ಥಾನದಲ್ಲಿದೆ.
ಮ್ಯಾಟ್ರಿಜ್ ಸಮೀಕ್ಷೆ:
ಬಿಜೆಪಿ: 35-40 ಸ್ಥಾನ
ಪೀಪಲ್ ಇನ್ಸೈಟ್:
ಬಿಜೆಪಿ: 40-44
ಆಮ್ ಆದ್ಮಿ ಪಕ್ಷ: 25-29
ಕಾಂಗ್ರೆಸ್ ಪಕ್ಷ: 1
ಪಿ-ಮಾರ್ಕ್ ಸಮೀಕ್ಷೆ:
ಬಿಜೆಪಿ: 39-49
ಆಮ್ ಆದ್ಮಿ ಪಕ್ಷ: 21-31
ಕಾಂಗ್ರೆಸ್: 0
ಇತರರು: 0
ಡಿವಿ ರಿಸರ್ಚ್:
ಬಿಜೆಪಿ 36-44
ಆಪ್: 26-34
ಕಾಂಗ್ರೆಸ್: 0
ಇತರರು: 0
ಪೀಪಲ್ ಪಲ್ಸ್:
ಬಿಜೆಪಿ: 51-60
ಎಎಪಿ: 10-19
ಚಾಣಕ್ಯ ಸ್ಟ್ರಾಟಜಿ:
ಬಿಜೆಪಿ: 39-44
ಆಪ್: 25-28
ಕಾಂಗ್ರೆಸ್: 2-3
ಇತರರು: 0
ದೈನಿಕ ಭಾಸ್ಕರ್:
ಆಪ್: 43-47
ಬಿಜೆಪಿ: 23-27
ಕಾಂಗ್ರೆಸ್: 0-1
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಇಂದು ತಮ್ಮ ಸರ್ಕಾರವನ್ನು ಆಯ್ಕೆ ಮಾಡಲು ತಮ್ಮ ಮತದಾನವನ್ನು ಚಲಾಯಿಸಿದರು. ಮತದಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು ಮತ್ತು ಸಂಜೆ 6 ಗಂಟೆಯವರೆಗೆ ನಡೆಯಿತು. ಇದು ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವಿನ ತ್ರಿಕೋನ ಸ್ಪರ್ಧೆಯಾಗಿದೆ. ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಪಕ್ಷವು ದೆಹಲಿಯಲ್ಲಿ ಮುಂದಿನ ಸರ್ಕಾರವನ್ನು ರಚಿಸುತ್ತದೆ. ಚುನಾವಣಾ ಆಯೋಗವು ಫೆಬ್ರವರಿ 8ರ ಶನಿವಾರ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಲಿದೆ