ಪ್ರಸ್ತುತ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾರತೀಯರು ಸೇರಿದಂತೆ ವಿದೇಶಗಳಿಂದ ಕೂಡ ಸಾವಿರಾರು ಭಕ್ತರು ಭಾಗಿಯಾಗುತ್ತಿದ್ದಾರೆ.
ಇದರ ನಡುವೆ ಇದುವರೆಗೆ ಕುಂಭಮೇಳದಲ್ಲಿ 200ಮಂದಿ ವಿದೇಶಿಗರು ಸನಾತನ ಧರ್ಮ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಸೆಕ್ಟರ್ 17ರಲ್ಲಿರುವ ಶಕ್ತಿಧಾಮದ ಆಶ್ರಮದಲ್ಲಿ ಜಗದ್ಗುರು ಸಾಯಿ ಮಾ ಲಕ್ಷ್ಮೀ ದೇವಿ ಅವರಿಂದ ದೀಕ್ಷೆ ಪಡೆದು ಗುರುವಾರ ಒಂದೇ ದಿನ 61ಮಂದಿ ವಿದೇಶಿಗರು ಹಿಂದೂ ಧರ್ಮ ಸ್ವೀಕರಿಸಿದ್ದಾರೆ.