ಬೆಂಗಳೂರು: ನಟ ದರ್ಶನ್ ಆಪ್ತ, ನವಗ್ರಹ ಸಿನಿಮಾ ಖ್ಯಾತಿಯ ಗಿರಿ ದಿನೇಶ್ (45) ನಿಧನರಾಗಿದ್ದಾರೆ. ಹಿರಿಯ ನಟ ದಿನೇಶ್ ಪುತ್ರರಾಗಿದ್ದ ಇವರು ನವಗ್ರಹ ಚಿತ್ರದಿಂದಾಗಿ ಒಳ್ಳೆಯ ಹೆಸರು ಮಾಡಿದ್ದರು.
ಶುಕ್ರವಾರ ಸಂಜೆ ದೇವರಿಗೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಹೃದಯಾಘಾತವಾಗಿ ಮನೆಯಲ್ಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲೇ ಕೊನೆಯುಸಿರೆಳೆದರು. ವಿವಾಹವಾಗದ ಗಿರಿ, ಚಮಕಾಯ್ದಿ ಚಿಂದಿ ಉಡಾಯ್ತಿ, ವಜ್ರ ಸಿನಿಮಾಗಳಲ್ಲಿ ನಟಿಸಿದ್ದರು.!