ಮುಂಬೈ: ನಟ ಸಲ್ಮಾನ್ ಖಾನ್ ಮೇಲೆ ಹಲವು ಕೇಸ್ಗಳು ಇವೆ. ಇವರ ಪೈಕಿ ಕೆಲವು ಕೇಸ್ಗಳಲ್ಲಿ ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಸದಾ ಕೆಲಸದಲ್ಲಿ ಬ್ಯುಸಿ ಇರೋ ಅವರು ಏಕಾ ಏಕಿ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಾಗ ಅದಕ್ಕೆ ಒಗ್ಗಿಕೊಲ್ಳೋಕೆ ಆಗಲಿಲ್ಲ. ಈ ಬಗ್ಗೆ ಅವರು ‘ದಂಬ್ ಬಿರಿಯಾನಿ’ಯಲ್ಲಿ ಭಾಗಿ ಆಗಿದ್ದಾರೆ. ಅಳಿಯ ಅರ್ಹಾನ್ ಖಾನ್ ಅವರು ಇದನ್ನು ಹೋಸ್ಟ್ ಮಾಡಿದ್ದಾರೆ.
ಜೈಲಿನಲ್ಲಿ ಯಾವ ರೀತಿಯ ಕ್ಷಣಗಳು ಇದ್ದವು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ‘ನಾನು ಸುಸ್ತಾಗಿ ಹೋಗುತ್ತಿದ್ದೆ. ಆದರೆ, ಎದ್ದೇಳಿ ಕೆಲಸ ಮಾಡಲೇಬೇಕು ಎಂದು ಎಲ್ಲರೂ ಹೇಳುತ್ತಿದ್ದರು. ಕಷ್ಟಪಟ್ಟು ಕೆಲಸ ಮಾಡಿದರೆ ನಿದ್ದೆ ತಾನಾಗೇ ಬರುತ್ತದೆ ಎನ್ನುತ್ತಿದ್ದರು. ಇದೆಲ್ಲ ನನಗೆ ಅರ್ಥ ಆಗುತ್ತಾ ಇರಲಿಲ್ಲ. ನಾನು ನಿತ್ಯ ಒಂದರಿಂದ ಎರಡು ಗಂಟೆ ನಿದ್ದೆ ಮಾಡುತ್ತಿದ್ದೆ. ತಿಂಗಳಿಗೆ ಒಮ್ಮೆ ಏಳು ಗಂಟೆ ಮಲಗುತ್ತಿದ್ದೆ’ ಎಂದಿದ್ದಾರೆ ಸಲ್ಮಾನ್ ಖಾನ್.
‘ಸಿನಿಮಾ ಶೂಟ್ ಮಧ್ಯೆ ಐದು ನಿಮಿಷ ಗ್ಯಾಪ್ ಪಡೆದುಕೊಳ್ಳುತ್ತಿದ್ದೆ. ನಾನು ಕುರ್ಚಿ ಮೇಲೆ ಮಲಗುತ್ತಿದ್ದೆ. ಇಲ್ಲಿ ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೆ. ನಾನು ಜೈಲಿನಲ್ಲಿದ್ದಾಗ ಕೇವಲ ನಿದ್ದೆ ಮಾತ್ರ ಮಾಡುತ್ತಿದ್ದೆ ಅದನ್ನು ಬಿಟ್ಟು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮ ಕೆಲಸ ಅಥವಾ ಕುಟುಂಬದ ವಿಷಯಕ್ಕೆ ಬಂದಾಗ, ನೀವು ನಿರಂತರವಾಗಿ ಮಾಡಬೇಕಾದ ಪ್ರಯತ್ನಗಳು ಹಲವು ಇರುತ್ತವೆ. ನೀವು ಸ್ನೇಹಿತರು ಮತ್ತು ಕುಟುಂಬ ಮತ್ತು ಕೆಲಸಕ್ಕಾಗಿ ಯಾವಾಗಲೂ ಇರಬೇಕಾಗುತ್ತದೆ’ ಎಂದಿದ್ದಾರೆ ಅವರು.
ಸಲ್ಮಾನ್ ಖಾನ್ ಅವರು 1998ರಲ್ಲಿ ನಡೆದ ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. 2006ರಲ್ಲಿ ಅವರಿಗೆ ಕೆಳಹಂತದ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆ ಬಳಿಕ ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಅವರು ಹೊರ ಬಂದರು.ಸಲ್ಮಾನ್ ಖಾನ್ ಅವರು ಸದ್ಯ ಎಆರ್ ಮುರುಗದಾಸ್ ನಿರ್ದೇಶನದ ‘ಸಿಖಂದರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ವರ್ಷ ಈದ್ ಪ್ರಯುಕ್ತ ಸಿನಿಮಾ ರಿಲೀಸ್ ಆಗುತ್ತಿದೆ.