ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
SSLC ಹಾಗೂ ಪಿಯುಸಿ 12ನೇ ತರಗತಿ (PUC) ಉತ್ತೀರ್ಣ ಆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಬಸಬಹುದು.ಎಎಐ ನೇಮಕಾತಿ ಅಧಿಸೂಚನೆ ಪ್ರಕಾರ, ನೀವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಮುಂದಿನ ಮಾಚ್ 5 ರೊಳಗೆ ಅರ್ಜಿ ಸಲ್ಲಿಸಬೇಕು.
ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI)
ಒಟ್ಟು ಹುದ್ದೆಗಳೂ 200+
ಹೆದ್ದೆಗಳ ಹೆಸರು: ಹಿರಿಯ & ಕಿರಿಯ ಸಹಾಯಕ
ಪೋಸ್ಟಿಂಗ್: ಭಾರತದಲ್ಲಿ
ಮಾಸಿಕ ವೇತನ: 1.10ಲಕ್ಷ ರೂ.
ಆನ್‌ಲೈನ್ ಲಿಂಕ್: https://aai.aero/
ಹುದ್ದೆಗಳ ಇತರ ವಿವರ
ಜೂನಿಯರ್ ಅಸಿಸ್ಟೆಂಟ್ ಫೈರ್ ಸರ್ವಿಸ್ ಹುದ್ದೆ: 152
ಹಿರಿಯ ಸಹಾಯಕರು (ಎಲೆಕ್ಟ್ರಾನಿಕ್ಸ್): 47
ಹಿರಿಯ ಸಹಾಯಕರು (ಅಕೌಂಟ್ಸ್) 21
ಹಿರಿಯ ಸಹಾಯಕರು ಅಫೀಶಿಯಲ್ ಲ್ಯಾಂಗ್ವೇಜ್ ಹುದ್ದೆ: 4
ಶೈಕ್ಷಣಿಕ ಅರ್ಹತೆ
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಹಿರಿಯ ಸಹಾಯಕ (ಅಧಿಕೃತ ಭಾಷೆ) ಹುದ್ದೆಗೆ ಅರ್ಜಿ ಸಲ್ಲಿಸಲು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. 2 ವರ್ಷದ ಕಾರ್ಯಾನುಭವ ಇರಬೇಕು. ಹಿರಿಯ ಸಹಾಯಕ (ಅಕೌಂಟ್ಸ್) ಹುದ್ದೆಗೆ ಕಂಪ್ಯೂಟರ್ ಪ್ರಾವೀಣ್ಯತೆ ಇರುವ ಜೊತೆಗೆ 2 ವರ್ಷ ಕಾರ್ಯಾನುಭವ ಹೊಂದಿರುವುದು ಖಡ್ಡಾಯ ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ.
ವಯೋಮಿತಿ ವಿವರ
ಈ ಎಎಐ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷ ಆಗಿರಬೇಕು. ಜಾತಿ ಆಧಾರದಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.