ಚಿತ್ರದುರ್ಗ: ಯಾವುದೇ ಪಕ್ಷ ಸ್ಥಿರವಾಗಿ ನಿಲ್ಲಲು ಪಕ್ಷದ ಸದಸ್ಯತ್ವ ಅತಿ ಮುಖ್ಯವಾಗಿದೆ. ಸದಸ್ಯತ್ವ ಹೆಚ್ಚಾದಷ್ಟು ಪಕ್ಷ ಸಧೃಢವಾಗುತ್ತದೆ. ಈ ಹಿನ್ನಲೆಯಲ್ಲಿ ಪಕ್ಷದ ಸದಸ್ಯತ್ವಕ್ಕೆ ಹೆಚ್ಚಿನ ಒತ್ತು ನೀಡುವಂತೆ ರಾಜ್ಯ ಜೆ.ಡಿ.ಎಸ್ ಘಟಕದ ಜಿಲ್ಲಾ ಉಸ್ತುವಾರಿಗಳು ತುರುವೇಕೆರೆ ಶಾಸಕರಾದ ಎಂ.ಟಿ. ಕೃಷ್ಣಪ್ಪ ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ನೀಲಕಂಠೇಶ್ವರ ದೇವಸ್ಥಾನ ಪಕ್ಕ ಇರುವ ಜಿಲ್ಲಾ ಜೆ.ಡಿ.ಎಸ್ ಘಟಕದ ಹೆಚ್.ಡಿ. ದೇವೇಗೌಡ ಭವನದ ಜಯಪ್ರಕಾಶ ನಾರಾಯಣ ವೇದಿಕೆಯಲ್ಲಿ ಮಂಗಳವಾರ ಹಮ್ಮಿಕೂಳ್ಳಲಾಗಿದ್ದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಟ್ಟಡಕ್ಕೆ ಫಿಲ್ಲರ್ ಎಷ್ಟು ಅಗತ್ಯವೇ ಅಷ್ಟೇ ಅಗತ್ಯ ಒಂದು ಪಕ್ಷಕ್ಕೆ ಸದಸ್ಯತ್ವ ಈ ಪಕ್ಷದಲ್ಲಿ ಅಭ್ಯರ್ಥಿಯಾದವರು ಸಹಾ ಸದಸ್ಯತ್ವ ಮಾಡಿಸುವ ಹೊಣೆಗಾರಿಕೆಯನ್ನು ಹೊರಬೇಕಿದೆ ಎಂದರು.
ಜನರ ಹತ್ತಿರ ಹೆಚ್ಚಿನ ಒಡನಾಟ ಇದ್ದವರು ಸಹಾ ಇದರ ಬಗ್ಗೆ ಹೆಚ್ಚಿನ ಹೊಣೆಯನ್ನು ಹೊರಬೇಕಿದೆ ಚುನಾವಣೆಯ ಸಮಯದಲ್ಲಿ ಹೊರಗಿನಿಂದ ತರುವದನ್ನು ಬಿಡಿ ನಿಮ್ಮಲ್ಲೆ ಪಕ್ಷದ ಅಭ್ಯರ್ಥಿಗಳಿದ್ದರೆ ಹೂರಗಡೆಯಿಂದ ತರುವ ಪ್ರಮಯ ಇರುವುದಿಲ್ಲ, ಈ ಮಟ್ಟಕ್ಕೆ ತಯಾರಗಾಬೇಕಿದೆ ಪಕ್ಷದ ಟೀಕೇಟ ನೀಡದಿದ್ದರೂ ಸಹಾ ಪಕ್ಷೇತರನಾಗಿ ಸ್ಪರ್ದೆ ಮಾಡುವ ಛಲ ಇರಬೇಕು ಆಗವ ಪಕ್ಷದವೇ ನಿಮ್ಮನ್ನು ಕರೆದು ಟೀಕೆಟು ನೀಡುತ್ತಾರೆ ಈ ರೀತಿಯ ಗುಣವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಅಭ್ಯರ್ಥಿಗಳಾಗುವವರು ಹೋರಾಟವನ್ನು ಮಾಡಬೇಕಿದೆ ಇಂದಿನ ಸಮಯದಲ್ಲಿ ಹಲವಾರು ಸಮಸ್ಯೆಗಳು ಇವೆ ಅವುಗಳ ವಿರುದ್ದ ಹೋರಾಟವನ್ನು ಮಾಡುವುದರ ಮೂಲಕ ನಿಮ್ಮನ್ನು ನೀವು ಗುರುತಿಸಿಕೊಳ್ಳಿ, ನಾನು ಸಹಾ ನಿಮ್ಮ ಜೊತೆಯಲ್ಲಿ ಇರುತ್ತೇವೆ, ದರಗಳು ಗಗನಕ್ಕೆ ಹೋಗಿವೆ, ರೈತರ ಬದುಕು ದುಸ್ತರವಾಗಿದೆ. ಇದರ ವಿರುದ್ದ ಹೋರಾಟವನ್ನು ಮಾಡುವುದರ ಮೂಲಕ ಜನರ ಗಮನವನ್ನು ಸೆಳೆಯಬೇಕಿದೆ ಇದರ ಮೂಲಕ ನಾಯಕರಾಗಬೇಕಿದೆ.
ಇಂದಿನ ದಿನಮಾನದಲ್ಲಿ ರಾಷ್ಟ್ರೀಯ ಪಕ್ಷಗಳ ಗತಿ ಏನಾಗಿದೆ ಎಂದು ನೋಡುತ್ತಿದ್ದೀರಾ ಈ ಸಮಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಇದರ ಲಾಭವನ್ನು ನಾವುಗಳು ಪಡೆಯಬೇಕಿದೆ. ಹೆಚ್ಚಿನ ರೀತಿಯಲ್ಲಿ ಸದಸ್ಯತ್ವವನ್ನು ಮಾಡುವುದರ ಮೂಲಕ ಪಕ್ಷವನ್ನು ಸಂಘಟಿಸಬೇಕಿದೆ ಪ್ರತಿಯೊಂದು ಬೂತ್ನಲ್ಲಿಯೂ ಸಹಾ ಹಿರಿಯರಿಗೆ ಮಹಿಳೆಯರಿಗೆ ಯುವ ಜನಾಂಗಕ್ಕೆ ಅದ್ಯತೆಯನ್ನು ನೀಡಿ ಎಂದು ತಿಳಿ ಹೇಳಿದರು.
ತುಮಕೂರಿನ ಮಾಜಿ ಶಾಸಕರಾದಹೆಚ್.ನಿಂಗಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನೂ ಜಿಲ್ಲಾ ಜೆ.ಡಿ.ಎಸ್ ಘಟಕದ ಅಧ್ಯಕ್ಷರಾದ ಎಂ ಜಯಣ್ಣ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕಾಂತರಾಜ್, ಜಿಲ್ಲಾ ಜೆ ಡಿ ಎಸ್ ಘಟಕದ ಮಾಜಿ ಅಧ್ಯಕ್ಷರಾದ ಡಿ ಯಶೋಧರ್, ವಿಧಾನಸಭಾ ಪರಾಜಿತ ಅಭ್ಯರ್ಥೀಗಳಾದ ರವೀಂದ್ರಪ್ಪ, ವೀರಭದ್ರಪ್ಪ, ಜಿಲ್ಲಾ ಘಟಕದ ಕಾರ್ಯಧ್ಯಕ್ಷರಾದ ಜಿ.ಬಿ. ಶೇಖರ್, ಜಿಲ್ಲೆಯ ತಾಲ್ಲೂಕ್ ಘಟಕದ ಅಧ್ಯಕ್ಷರಾದ ಸಣ್ಣತಿಮ್ಮಪ್ಪ, ಹನುಮಂತರಾಯಪ್ಪ, ಕರಿಬಸಪ್ಪ, ಗಣೇಶಮೂರ್ತಿ, ಪರಮೇಶ್ವರಪ್ಪ,ಪಿ.ತಿಪ್ಪೇಸ್ವಾಮಿ, ವಿವಿಧ ಘಟಕಗಳ ಅಧ್ಯಕ್ಷರಾದ ಲಿಂಗರಾಜ್, ಪ್ರತಾಪ್ ಜೋಗಿ, ಪರಮೇಶ್ ಅಬ್ಬು ರಾಜ್ಯ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ. ಗೋಪಾಲಸ್ವಾಮಿನಾಯಕ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದಡಿ ತಾಲ್ಲೂಕುವಾರು ಅಧ್ಯಕ್ಷರುಗಳಿಗೆ ಸದಸ್ಯತ್ವದ ರಸೀದಿ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.