ಈ ವರ್ಷದ ಬೇಸಿಗೆ ಕಾಲ ಆದಷ್ಟು ಬೇಗನೇ ಆಗಮಿಸುತ್ತಾ ಇದ್ದು, ಜನರಿಗೆ ಎಚ್ಚರವಾಗಿರಿ ಅನ್ನೋ ಹೈ ಅಲರ್ಟ್ ನೀಡಲಾಗುತ್ತಿದೆ. ಅದರಲ್ಲೂ ಕೇರಳ ಸರ್ಕಾರದ ಕಾರ್ಮಿಕ ಆಯೋಗ ಈ ಸನ್ ಸ್ಟ್ರೋರ್’ಹಿನ್ನೆಲೆಯಲ್ಲಿ ಕಾರ್ಮಿಕರಿಗಾಗಿ ಹೊಸ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.
ಇನ್ನು ಮುಂದೆ ಕೇರಳದಲ್ಲಿ ಕಾರ್ಮಿಕರು ಕೆಲಸ ಮಾಡುವ ಅವಧಿ ಬದಲಾಯಿಸಲು ತೀರ್ಮಾನ ಮಾಡಲಾಗಿದೆ. ಸನ್ ಸ್ಟ್ರೋಕ್ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಮೇ 10ರವರೆಗೂ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಹೊಸ ಗೈಡ್ಲೈನ್ಸ್ಗಾಗಿ ವಿಶೇಷ ತಂಡವನ್ನು ರಚನೆ ಮಾಡಲಾಗಿದ್ದು, ಅದರ ಪ್ರಕಾರ ಕಾರ್ಮಿಕರ ಕೆಲಸದ ಅವಧಿ 8 ಗಂಟೆ ಇರಬೇಕು. ಅದು ಬೆಳಗ್ಗೆ 7ರಿಂದ ಸಂಜೆ 7 ಗಂಟೆ. ಇದರ ಮಧ್ಯೆ ಮಧ್ಯಾಹ್ನ 12ಗಂಟೆಯಿಂದ 3ಗಂಟೆಯವರೆಗೂ ವಿಶ್ರಾಂತಿಯ ಅವಧಿ ಕಡ್ಡಾಯಗೊಳಿಸಲಾಗಿದೆ.
ಪ್ರಮುಖವಾಗಿ ಕಟ್ಟಡ ಕಾರ್ಮಿಕರು, ರಸ್ತೆಯಲ್ಲಿ ಕೆಲಸ ಮಾಡುವ ಕೂಲಿಗಾರರಿಗೆ ಈ ಹೊಸ ನಿಯಮ ಅನ್ವಯವಾಗುತ್ತದೆ. ಕೇರಳದಂತೆ ಕರ್ನಾಟಕದಲ್ಲೂ ಬಿಸಿಲಿನ ರುಳ ದಿನಕಳೆದಂತೆ ಹೆಚ್ಚಾಗುತ್ತಿದೆ. ಫೆಬ್ರವರಿ ಮುಗಿಯುವುದರೊಳಗೆ
ಬಿಸಿಲಿನ ಶಾಖ ತಟ್ಟಲಿದ್ದು, ಮೇ ತಿಂಗಳು ಮುಗಿಯುವವರೆಗೂ ಎಲ್ಲರೂ ಎಚ್ಚರದಿಂದ ಇರೋದು ಒಳ್ಳೆಯದು