ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು “ಗೃಹಲಕ್ಷಿ ಯೋಜನೆ” ಪ್ರಮುಖ ಪಾತ್ರ ವಹಿಸಿದೆ.
ಇದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ತರ ಹೆಜ್ಜೆ ಎಂಬಂತೆ ಪರಿಗಣಿಸಲಾಯಿತು. ಪ್ರಸ್ತುತ ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ತಿಂಗಳಿಗೆ
2,000ರೂ. ನೆರವು ನೀಡಲಾಗುತ್ತಿದೆ.
ಕೆಲ ತಿಂಗಳಿನಿಂದ ಅದು ಸ್ಥಗಿತವಾಗಿದೆ. ಈ ನಡುವೆ, ಈ ಮೊತ್ತವನ್ನು 3,000ಕ್ಕೆ ಹೆಚ್ಚಿಸಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಾರಿಯ ರಾಜ್ಯ ಬಜೆಟ್ ವೇಳೆ ಈ ವಿಷಯದ ಘೋಷಣೆ ಮಾಡಲಿದೆ ಎನ್ನಲಾಗಿದೆ.