ಬೆಂಗಳೂರು : ನಟ ಡಾಲಿ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಅವರ ವಿವಾಹ ಸಮಾರಂಭ ಆರಂಭವಾಗಿದ್ದು, ಹಳದಿ ಶಾಸ್ತ್ರ ಧನಂಜಯ್ ಅವರ ಮನೆಯಲ್ಲಿ ಬಹಳ ಅದ್ದೂರಿಯಾಗಿ ನಡೆದಿದೆ.
ಹಳದಿ ಶಾಸ್ತ್ರದಲ್ಲಿ ಹಿರಿಯ ನಟ ಹಾಗೂ ಮಾಜಿ ಸಚಿವ ಬಿ.ಸಿ.ಪಾಟೀಲ್, ಅವರ ಕುಟುಂಬಸ್ಥರು ಪಲ್ಗೊಂಡಿದ್ದು ಸಮಾರಂಭಕ್ಕೆ ಮತ್ತಷ್ಟು ಮೆರುಗು ನೀಡಿತು. ಜರ್ಮನಿಯಿಂದ ಬಂದ ರಂಗ ನಿರ್ದೇಶಕ ಕ್ರಿಸ್ಟೆನ್ ಕೂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಧನಂಜಯ್, ಧನ್ಯತಾ ಜೋಡಿಯು ಕುಟುಂಬದ ಸದಸ್ಯರು, ಸ್ನೇಹಿತರ ಜೊತೆ ಸೇರಿ ಹಳದಿ ಶಾಸ್ತ್ರವನ್ನು ಆನಂದಿಸಿದರು. ಇಂದು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಟ ಮತ್ತು ಡಾಕ್ಟರ್ ಜೋಡಿ ಆರತಕ್ಷತೆ ನಡೆಯಲಿದೆ. ಇಂದು ಬೆಳಗ್ಗೆಯಿಂದಲೇ ಶಾಸ್ತ್ರಗಳು ಆರಂಭವಾಗಿದ್ದು ಸಂಜೆ 6 ಗಂಟೆಯ ನಂತರ ಆರತಕ್ಷತೆ ಕಾರ್ಯಕ್ರಮ ಇರಲಿದೆ. ಸಹಸ್ರಾರು ಸಂಖ್ಯೆಯ ತಾರಾಬಳಗ ಹಾಗೂ ರಾಜಕೀಯ ಘಣ್ಯರು ಅರತಕ್ಷತೆಯಲ್ಲಿ ಪಾಲ್ಗೊಂಡು ವಧುವರರಿಗೆ ಆಶೀರ್ವದಿಸಲಿದ್ದಾರೆ.