ಕೇರಳದ ವ್ಯಕ್ತಿಯೊಬ್ಬರು ಬೆಳಗಿನ ಜಾವ 3 ಗಂಟೆಗೆ ನೆರೆಮನೆಯ ಕೋಳಿ ಕೂಗುತ್ತಿರುವ ಬಗ್ಗೆ ದೂರು ದಾಖಲಿಸಿದ್ದು, ಇದು ನನ್ನ ಶಾಂತಿಯುತ ಜೀವನವನ್ನು ಹಾಳು ಮಾಡುತ್ತಿದೆ.ಬೆಳಗಿನ ಜಾವ ತನ್ನ ನಿದ್ರೆಗೆ ಭಂಗ ತಂದಿದ್ದಕ್ಕಾಗಿ ದೂರು ದಾಖಲಿಸಿದ್ದಾರೆ.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರಾಧಾಕೃಷ್ಣ ಕುರುಪ್ ಅವರಿಗೆ ಸಾಕಾಗಿತ್ತು. ತನ್ನ ನೆರೆಮನೆಯ ಅನಿಲ್ ಕುಮಾರ್ ಎಂಬುವವರ ಕೋಳಿ ತನ್ನ ನಿದ್ರೆಗೆ ಭಂಗ ತರುತ್ತಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಅಧಿಕಾರಿಗಳು ಈ ದೂರನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಆರಂಭಿಸಿದರು. ಕೋಳಿಯೇ ಎರಡೂ ಮನೆಯ ಸಮಸ್ಯೆಗೆ ಕಾರಣ ಎಂದು ನಿರ್ಧರಿಸಿದರು. ಇಬ್ಬರನ್ನೂ ಕರೆಸಿ ಈ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಬಳಿಕ ಅಧಿಕಾರಿಗಳು ಆ ಸ್ಥಳವನ್ನು ಪರಿಶೀಲಿಸಿದರು.
ನೆರೆಹೊರೆಯವರು ತಮ್ಮ ಕೋಳಿಗಳನ್ನು ತಮ್ಮ ಮನೆಯ ಮೇಲಿನ ಮಹಡಿಯಲ್ಲಿ ಇಟ್ಟುಕೊಂಡಿರುವುದು ಕಂಡುಬಂದಿದೆ. ರಾಧಾಕೃಷ್ಣ ಕುರುಪ್ ಅವರಿಗೆ ಕೋಳಿಯ ಕೂಗುವಿಕೆಯಿಂದ ನಿಜಕ್ಕೂ ತೊಂದರೆಯಾಗುತ್ತಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ. ವಿವಾದವನ್ನು ಬಗೆಹರಿಸಲು ಕೋಳಿ ಶೆಡ್ ಅನ್ನು ಮೇಲಿನ ಮಹಡಿಯಿಂದ ಮನೆಯ ಅಂಗಳದ ಪಕ್ಕಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳು ರಾಧಾಕೃಷ್ಣ ಅವರ ನೆರೆಹೊರೆಯವರಿಗೆ ಸೂಚಿಸಿದ್ದಾರೆ.