ಚಿತ್ರದುರ್ಗ: ನಗರದ ಕಬೀರಾನಂದ ಬಡಾವಣೆಯಲ್ಲಿನ ಶ್ರೀ ಕಬೀರಾನಂದ ಆಶ್ರಮದವತಿಯಿಂದ ನಡೆಯುವ 95ನೇ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಇಂದು ಸಂಜೆ ನಡೆದ ಕಾರ್ಯಕ್ರಮಕ್ಕೆ ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ವಿರೇಂದ್ರ ಪಪ್ಪಿ ಮಾನವನಾಗಿ ಹುಟ್ಟಿದ ಮೇಲೆ ಸಾವು ಸಹಜ ಇದರ ಮಧ್ಯದಲ್ಲಿ ಏಮಾದರೂ ಸಾಧನೆಯನ್ನು ಮಾಡಬೇಕಿದೆ ಇದಕ್ಕೆ ಗುರುವಿನ ಅನುಗ್ರಹ ಅಗತ್ಯವಾಗಿದೆ ಇದನ್ನು ಪಡೆಯಲು ಇಂತಹ ಕಾರ್ಯಕ್ರಮಗಳಿಗೆ ಆಗಮಿಸಿ ಗುರುಗಳ ಮಾತನ್ನು ಆಲಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಮನುಷ್ಯನ ಬದುಕಿನಲ್ಲಿ ಗಂಡು ಹೆಣ್ಣು ಚಕ್ರದ ಬಂಡಿದ ಗಾಲಿಗಳು ಇದ್ದಂತೆ ಇದರಲ್ಲಿ ಕೀಲಿಗಳು ಸರಿಯಿದ್ದರೆ ಮಾತ್ರ ಬಂಡಿ ಸರಿಯಾಗಿ ಹೋಗಲು ಸಾದ್ಯವಿದೆ ಇದೆ ರಿತಿಯಾಗಿ ಜೀವನದ ಬಂಡಿ ಸರಿಯಿದ್ದರೆ ಮಾತ್ರ ಉತ್ತಮವಾದ ಬದುಕು ನಡೆಸಲು ಸಾಧ್ಯವಿದೆ. ನಮಹಂತರಿಗೆ ಜೀವನದ ದಾರಿಯನ್ನು ತೋರಿಸುವವರು ಇಂತಹ ಮಠಾಧೀಶರು, ಇವರ ಮಾರ್ಗದರ್ಶನದಲ್ಲಿ ನಾವುಗಳು ನಡೆಯಬೇಕಿದೆ ಈ ಆಶ್ರಮದಲ್ಲಿ ಯಾವುದೇ ಜಾತಿ ಧರ್ಮ ಇಲ್ಲ ಇಲ್ಲಿ ಎಲ್ಲರು ಸಹಾ ಒಂದೇ ಶ್ರೀಗಳು ಎಲ್ಲರಿಗೂ ಸಹಾ ಆರ್ಶೀವಾದವನ್ನು ನೀಡುತ್ತಾರೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್ ಮಾತನಾಡಿ, ಕಬೀರಾನಂದಾಶ್ರಮದ ಶಿವರಾತ್ರಿಯ ಹೆಸರಿನಲ್ಲಿ ಶಿವನಾಮ ಸ್ಮರಣೆಯನ್ನು ಮಾಡುವಂತೆ ಮಾಡಿದೆ ಕಳೆದ 94 ವರ್ಷಗಳಿಂದ ಈ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ. ಶಿವನ ವಿಚಾರಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಈ ಸಪ್ತಾಹದಲ್ಲಿ ಮಾಡಲಾಗುತ್ತಿದೆ. ಒಂದು ಕಾಲದಲ್ಲಿ ನಮ್ಮ ಹಿಂದೂ ಧರ್ಮವನ್ನು ಕೀಳಾಗಿ ನೋಡಲಾಗುತ್ತಿತ್ತು ಆದರೆ ಈಗ ಅದೇ ಹಿಂದೂ ಧರ್ಮವನ್ನು ಪ್ರಪಂಚ ಉನ್ನತ ಮಟ್ಟದಲ್ಲಿ ನೋಡುತ್ತಿದೆ, ಇದಕ್ಕೆ ಪ್ರಯಾಗ ರಾಜ್ದಲ್ಲಿ ನಡೆಯುತ್ತಿರು ಮಹಾಕುಂಭ ಮೇಳ ಸಾಕ್ಷಿಯಾಗಿದೆ. ಶಾಂತಿಯನ್ನು ನೀಡುವ ದೇಶ ಎಂದರೆ ಅದು ಭಾರತ ಎನ್ನುವಂತಾಗಿದೆ. ಶಿವನ ಆರಾಧನೆಯನ್ನು ಮಾಡುವುದರ ಮೂಲಕ ಆತನ ಸ್ಮರಣೆಯನ್ನು ಮಾಡಬೇಕಿದೆ ಎಂದರು.
ಚಳ್ಳಕೆರೆಯ ಶ್ರೀ ಸದ್ಗುರು ನರಹರಿ ಪೀಠದ ಪೀಠಾಧಿಪತಿಗಳಾದ ಶ್ರೀ ರಾಜಾರಾಮ್ ಶ್ರೀಗಳು ಮಾತನಾಡಿ, ನರರಿಗೆ ಮುಕ್ತಿಯನ್ನು ಸಿಗಬೇಕಾದರೆ ಈ ರೀತಿಯಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಮಠಾಧೀಶರು ನೀಡುವಂತ ಮಾತುಗಳನ್ನು ಆಲಿಸಬೇಕಿದೆ, ಆಗ್ರ ಮಾತ್ರ ನರರಾದ ನಮಗೆ ಮುಕ್ತಿ ದೂರಕಲು ಸಾಧ್ಯವಿದೆ. ವಿವಿಧ ರೀತಿಯ ಬಂಧನಗಳಿಂದ ಬಿಡುಗಡೆಯಾಗ ಬಯಸುವವರಿಗೆ ಗುರುಗಳ ವಚನಾಮೃತ ಆಗತ್ಯ ಇದೆ. ತಂದೆ ತಾಯಿಯವರನ್ನು ಗೌರವಿಸಬೇಕಿದೆ. ಅವರಿಗೆ ನಮಸ್ಕಾರವನ್ನು ಮಾಡುವುದರ ಮೂಲಕ ಸಂಸ್ಕಾರವಂತರಾಗಬೇಕಿದೆ. ಇಂದಿನ ದಿನಮಾನದಲ್ಲಿ ಮಾನವನಿಗೆ ಮಾತ್ರ ಧರ್ಮ ಗ್ರಂಥಗಳ ಭೋಧನೆ, ಮಠ ಮಂದಿರಗಳು ಅಗತ್ಯವಾಗಿದೆ, ಮಾನವ ಸ್ವಾರ್ಥಿಯಾಗಿದ್ದಾನೆ ಆದರೆ ಮಠಗಳು, ಪ್ರಾಣಿ, ಪಕ್ಷಿಗಳು ಮಾತ್ರ ನಿಸ್ವಾರ್ಥಿಯಾಗಿರುತ್ತವೆ ಎಂದರು.
ದಿವ್ಯ ಸಾನಿಧ್ಯವನ್ನು ಶೃಂಗೇರಿಯ ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ್ ಶ್ರೀಗಳು, ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ್ ಶ್ರೀಗಳು ಕಬೀರಾನಂಧಾಶ್ರಮ ಶ್ರೀ ಶಿವಲಿಂಗಾನಂಧ ಶ್ರೀಗಳು ವಹಿಸಿದ್ದರು ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಂ.ಶಿವಸ್ವಾಮಿ, 95ನೇ ಮಹಾ ಶಿವರಾತ್ರಿ ಮಹೋತ್ಸವದ ಆಧ್ಯಕ್ಷರಾದ ವಿಜಯಕುಮಾರ್, ನಗರಸಭಾ ಸದಸ್ಯರಾಧ ಶ್ರೀಮತಿ ಪೂಜಾ ಮಂಜುನಾಥ್, ವಾಣೀಜ್ಯೋದ್ಯಮಿಗಳಾದ ಸೇತುರಾಂ, ಭಾಗವಹಿಸಿದ್ದರು.
ಸುಬ್ರಾಯ ಭಟ್ಟರು ವೇಧ ಘೋಷ ಮಾಡಿದರೆ ಶ್ರೀಮತಿ ಸಮನಾ ಪ್ರಾರ್ಥಿಸಿದರು ನಾಗರಾಜ್ ಸಂಗಂ ಸ್ವಾಗತಿಸಿದರು. ವಿಮಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಾತೃಶ್ರೀ ವಿದ್ಯಾ ಸಂಸ್ಥೆಯ ಮಕ್ಕಳು ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಫೆ. 23 ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಡಾ.ಬಸವಕುಮಾರ ಶ್ರೀಗಳು, ಹಂಪಿಯ ಹೇಮಕೂಟದ ಶಿವರಾಮಾವಧೂತ ಆಶ್ರಮದ ಶ್ರೀ ವಿದ್ಯಾನಂದ ಭಾರತಿ ಶ್ರೀಗಳು ವಹಿಸಲಿದ್ದಾರೆ. ಮಾಜಿ ಸಚಿವರಾಧ ಹೆಚ್.ಅಂಜನೇಯ, ಅದಿಜಾಂಬವ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ನಗರಸಭಾ ಆಧ್ಯಕ್ಷರಾದ ಶ್ರೀಮತಿ ಸುಮಿತ್ರ ರಾಘವೇಂದ್ರ, ಪೌರಾಯುಕ್ತರಾದ ಶ್ರೀಮತಿ ರೇಣುಕಾ, ಬಿಜೆಪಿ ಮುಖಂಡರಾದ ಶ್ರೀಮತಿ ರೇಖಾ, ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.