ಬೆಂಗಳೂರು: ಒಬ್ಬರಾದ ಮೇಲೆ ಒಬ್ಬರಂತೆ ಕಿರುತೆರೆ ನಟ-ನಟಿಯರು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹಾಗೆಯೇ ವೈವಾಹಿಕ ಜೀವನಕ್ಕೆ ಕಿರುತೆರೆ ನಟಿ ಮೇಘಶ್ರೀ ಗೌಡ ಕಾಲಿಟ್ಟಿದ್ದಾರೆ.
ಇದೀಗ ಅವರ ಮದುವೆಯ ಫೋಟೋಗಳು ವೈರಲ್ ಆಗುತ್ತಿದೆ. ನಟಿ ಮೇಘಶ್ರೀ ಕುಂದಾಪುರ ಮೂಲದ ಪುರಂದರ ಎಂಬುವವರನ್ನು ಮದುವೆಯಾಗಿದ್ದಾರೆ. 2025 ರ ಹೊಸ ವರ್ಷದಂದೇ ನಿಶ್ಚಿತಾರ್ಥ ಮಾಡಿಕೊಂಡು, ತಾವು ಮದುವೆಯಾಗುತ್ತಿರೋ ಹುಡುಗನ ಫೋಟೋವನ್ನು ರಿವೀಲ್ ಮಾಡಿದ್ದರು.
ಸತ್ಯ, ಮೈನಾ, ನಿನ್ನ ಜೊತೆ ನನ್ನ ಕಥೆ, ಪುಣ್ಯವತಿ ಸೇರಿದಂತೆ ಸಾಕಷ್ಟು ಧಾರಾವಾಹಿಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ನಟಿ ಮೇಘಶ್ರೀ ಬ್ಯೂಟಿಫುಲ್ ಮನಸ್ಸುಗಳು, ಮುಗುಳು ನಗೆ, ಸ್ಟೇಟ್ ಮೆಂಟ್, ಕಡ್ಡಿಪುಡಿ, ಸಂತು ಸ್ಟ್ರೈಟ್ ಫಾರ್ವರ್ಡ್, ಪಂಟ್ರು, ಮೂಕಜೀವ, ಮುಗಿಲ್ ಪೇಟೆ ಸೇರಿದಂತೆ ಇನ್ನಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಮೇಘಶ್ರೀ ಗೌಡ ಹ್ಯಾಪಿ ಮೂಡ್ನಲ್ಲಿದ್ದಾರೆ