ನವದೆಹಲಿ : ನ್ಯೂಯಾರ್ಕ್ನ ಜಾನ್ ಎಫ್ ಕೆ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟ್ಟಿದ್ದ ವಿಮಾನ ರೋಮ್ನಲ್ಲಿ ಭಾನುವಾರ(ಫೆ.23) ಸಂಜೆ ತುರ್ತು ಭೂ ಸ್ಪರ್ಶ ಮಾಡಿದೆ. ಬಾಂಬ್ ಬೆದರಿಕೆ ಹಿನ್ನೆಲೆ ಈ ನಿರ್ಧಾರ ತಳೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೋಯಿಂಗ್ 787-9 ಡ್ರೀಮ್ಲೈನರ್ ವಿಮಾನ ಕ್ಯಾಸ್ಪಿಯನ್ ಸಮುದ್ರದ ಮೇಲೆ ಪಶ್ಚಿಮಕ್ಕೆ ಹೋಗುವ ಮೊದಲು ಇಟಲಿಯತ್ತ ತನ್ನ ಮಾರ್ಗ ಬದಲಿಸಿದೆ. ಇದರಲ್ಲಿ 280 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ನ್ಯೂಯಾರ್ಕ್ ನಿಂದ ಶನಿವಾರ(ಫೆ.22) ರಾತ್ರಿ 8-30ರ ಸಮಯದಲ್ಲಿ ಟೇಕ್ ಆಫ್ ಆದ ವಿಮಾನ ದೆಹಲಿಯತ್ತ ಹೊರಟಿಸಿದೆ. ಸುಮಾರು 10 ಗಂಟೆಗಳ ಹಾರಾಟದ ನಂತರ ವಿಮಾನವು ಕಪ್ಪು ಸಮುದ್ರದ ಬಳಿ ಹಠಾತ್ ಮಾರ್ಗವನ್ನು ಬದಲಾಯಿಸಿದೆ. ದಿಕ್ಕು ಬದಲಿಸಿದ ಅದು ರೋಮ್ನ ಫಿಮಿಸಿನೊ ವಿಮಾನ ನಿಲ್ದಾಣದ ಕಡೆಗೆ ಹೊರಟಿದೆ.
ಟಾಲಿಯನ್ ವಾಯುಪ್ರದೇಶ ಸಮೀಪಿಸಿದ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಇಟಾಲಿಯನ್ ಯುದ್ದ ವಿಮಾನಗಳು ಬೆಂಗಾವಲು ಮಾಡಿದ್ದಾಗಿ ವರದಿಯಾಗಿದೆ. ವಿಮಾನವು ಭಾನುವಾರ 5:30ರ ವೇಳೆಗೆ ರೋಮ್ನಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಮಾನ ಹಾರಾಟದ ಮಧ್ಯದಲ್ಲಿ ಬಾಂಬ್ ಬೆದರಿಕೆ ಕರೆ ಬಂದಿರುವುದು ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
