ಇಸ್ಲಾಮಾಬಾದ್:ಆರ್ಥಿಕತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸದಿದ್ದರೆ, ನನ್ನ ಹೆಸರು ಶೆಹಬಾಜ್ ಷರೀಫೇ ಅಲ್ಲ ಎಂದು ಪಾಕ್ ಪ್ರಧಾನಿ ಷರೀಫ್ ಸವಾಲು ಹಾಕಿದ್ದಾರೆ.
ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರ ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಿದೆ. ಪಾಕಿಸ್ತಾನದ ಪರಿಸ್ಥಿತಿ ಸುಧಾರಿಸಲು ನಾವು ಹಗಲಿರುಳು ಕೆಲಸ ಮಾಡುತ್ತೇವೆ. ಸರ್ವಶಕ್ತನು ಯಾವಾಗಲೂ ಪಾಕಿಸ್ತಾನವನ್ನು ಆಶೀರ್ವದಿಸಿದ್ದಾನೆ. ಅಭಿವೃದ್ಧಿ ಮತ್ತು ಪ್ರಗತಿಯ ವಿಷಯದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸದಿದ್ದರೆ ನನ್ನ ಹೆಸರನ್ನೇ ಬದಲಾಯಿಸುತ್ತೇನೆಂದು ತಿಳಿಸಿದ್ದಾರೆ.
ತಮ್ಮ ಹಿರಿಯ ಸಹೋದರ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮೇಲೆಯೂ ಪ್ರಮಾಣ ಮಾಡುತ್ತಾ, ನಾನು ನವಾಜ್ ಷರೀಫ್ ಅವರ ಅಭಿಮಾನಿ. ಅವರ ಅನುಯಾಯಿ. ಇಂದು ಅವರ ಮೇಲೆ ಪ್ರಮಾಣ ಮಾಡುತ್ತೇನೆ. ನನಗೆ ಶಕ್ತಿ ಮತ್ತು ಇಚ್ಛಾಶಕ್ತಿ ಇರುವವರೆಗೂ, ನಾವೆಲ್ಲರೂ ಒಟ್ಟಾಗಿ ಪಾಕಿಸ್ತಾನವನ್ನು ಶ್ರೇಷ್ಠತೆಯತ್ತ ಕೊಂಡೊಯ್ಯಲು ಮತ್ತು ಭಾರತವನ್ನು ಸೋಲಿಸಲು ಕೆಲಸ ಮಾಡುತ್ತೇವೆ ಎಂದಿದ್ದಾರೆ.