ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹಿಂದುತ್ವ ರಾಷ್ಟ್ರೀಯ ಸಿದ್ಧಾಂತವಾದಿ ವೀರ್ ಸಾವರ್ಕರ್ ಅವರ ಪುಣ್ಯಸ್ಮರಣಾ ದಿನದಂದು ಗೌರವ ಸಲ್ಲಿಸಿದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ಅಮೂಲ್ಯ ತ್ಯಾಗ, ಧೈರ್ಯ ಮತ್ತು ಹೋರಾಟವನ್ನು ಕೃತಜ್ಞರಾಗಿರುವ ರಾಷ್ಟ್ರ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾವರ್ಕರ್ ಕೂಡ ಒಬ್ಬ ಪ್ರತಿಭಾನ್ವಿತ ಬರಹಗಾರರಾಗಿದ್ದರು ಮತ್ತು ಅವರ ಅನೇಕ ವಿಚಾರಗಳು, ವಿಶೇಷವಾಗಿ ಹಿಂದುತ್ವದ, ರಾಷ್ಟ್ರೀಯತೆಯ ಕುರಿತಾಗಿದ್ದವು.