ಮೈಸೂರು: ಕನ್ನಡದ ಖ್ಯಾತ ಭಾಷಾವಿಜ್ಞಾನಿ ಡಾ. ಕೆ. ಕೆಂಪೇಗೌಡ ಅವರು ಇಂದು (ಫೆ.26) ನಿಧನರಾಗಿದ್ದಾರೆ.
ಮೈಸೂರಿನ ಸರಸ್ವತಿಪುರಂನಲ್ಲಿರುವ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಚನ್ನಪಟ್ಟಣದ ಹೆಚ್ ಬ್ಯಾಡ್ರಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.
ಹಿರಿಯ ಲೇಖಕ ಹಾಗೂ ವಿದ್ವಾಂಸರಾದ ಕೆಂಪೇಗೌಡ ಅವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಶೆಟ್ಟಿಹಳ್ಳಿಯಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ಚನ್ನಪಟ್ಟಣದಲ್ಲಿ ಹೈಯರ್ ಸೆಕೆಂಡರಿ ಶಿಕ್ಷಣ ಪಡೆದರು.
ಇದನ್ನೂ ಓದಿ: ಚಳಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಹಿರಿಯ ಪೊಲೀಸ್ ಅಧಿಕಾರಿ!
ಮೈಸೂರು ವಿಶ್ವವಿದ್ಯಾಲಯದಿಂದ ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. (ಸಂಶೋಧನೆ ಮತ್ತು ಗ್ರಂಥ ರಚನೆಗೆ ಅನುವಾದ A Descriptive Analysis of Irula Dialect) ಈ ವಿಷಯ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ 1974ರಲ್ಲಿ ಪಿಎಚ್.ಡಿ.ಪದವಿ ಪಡೆದರು. ಅವರ ‘ಸಾಮಾನ್ಯ ಭಾಷಾ ವಿಜ್ಞಾನ’ ಕೃತಿಗೆ 1995ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದರು. 1976 ರಲ್ಲಿ ‘ಭಾಷಾ ವಿಜ್ಞಾನ ಕೋಶ’, 1979 ಹಾಗೂ 1980 ರಲ್ಲಿ ಕ್ರಮವಾಗಿ ‘ಧ್ವನಿ ವಿಜ್ಞಾನ’, ‘ಧ್ವನಿಮಾ ವಿಜ್ಞಾನ’ 1993 ರಲ್ಲಿ ‘ಸಾಮಾನ್ಯ ಭಾಷಾ ವಿಜ್ಞಾನ’, 1994 ರಲ್ಲಿ ‘ಕನ್ನಡ ಭಾಷಾ ಚರಿತ್ರೆ’, 1996 ರಲ್ಲಿ ‘ತೌಲನಿಕ ದ್ರಾವಿಡ ಭಾಷಾ ವಿಜ್ಞಾನ’, 1997 ರಲ್ಲಿ ‘ಕನ್ನಡ ಭಾಷ ಸ್ವರೂಪ’, 2002 ರಲ್ಲಿ, ಕನ್ನಡ ಉಪಭಾಷೆಗಳ ಅಧ್ಯಯನ’ ಎಂಬ ಗ್ರಂಥಗಳು ಮಾತ್ರವಲ್ಲದೆ, ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಲೇಖನಗಳನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
