ಮುಂಬೈ: ಅಫ್ಘಾನಿಸ್ತಾನ್ ತಂಡದ ಈ ರೋಚಕ ಗೆಲುವಿನ ಬೆನ್ನಲ್ಲೇ ಇರ್ಫಾನ್ ಪಠಾಣ್ ಅಫ್ಘಾನ್ ಸ್ಟೈಲ್ ಡ್ರೆಸ್ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಫ್ಘಾನಿಸ್ತಾನ್ ತಂಡವನ್ನು ಅಭಿನಂದಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ತಂಡ ಜಯ ಸಾಧಿಸಿದೆ. ಈ ರೋಚಕ ಗೆಲುವಿನ ಬೆನ್ನಲ್ಲೇ ಇರ್ಫಾನ್ ಪಠಾಣ್ ಅಫ್ಘಾನ್ ಸ್ಟೈಲ್ ಡ್ರೆಸ್ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ಪರ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್ (177) ಭರ್ಜರಿ ಶತಕ ಸಿಡಿಸಿದ್ದರು.
ಈ ಶತಕದ ನೆರವಿನಿಂದ ಅಫ್ಘಾನಿಸ್ತಾನ್ ತಂಡ 50 ಓವರ್ಗಳಲ್ಲಿ 325 ರನ್ ಕಲೆಹಾಕಿತು. ಈ 326 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರ ಜೋ ರೂಟ್ (120) ಸೆಂಚುರಿ ಬಾರಿಸಿದರು. ಇದಾಗ್ಯೂ ಇಂಗ್ಲೆಂಡ್ ತಂಡ 49.5 ಓವರ್ಗಳಲ್ಲಿ 317 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಅಫ್ಘಾನಿಸ್ತಾನ್ ತಂಡ 8 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಈ ಹಿಂದೆ 2023ರ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದ ಅಫ್ಘಾನಿಸ್ತಾನ್ ತಂಡದ ಜೊತೆ ಇರ್ಫಾನ್ ಪಠಾಣ್ ಮೈದಾನದಲ್ಲೇ ಡ್ಯಾನ್ಸ್ ಮಾಡಿದ್ದರು. ಇದೀಗ ಈ ವರ್ಷದ ಗೆಲುವಿನಲ್ಲೂ ಇರ್ಫಾನ್ ಪಠಾಣ್ ಅಫ್ಘಾನ್ ಸ್ಟೈಲ್ ಡ್ರೆಸ್ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗೆ ಅಫ್ಘಾನಿಸ್ತಾನ್ ತಂಡದ ಸ್ಟಾರ್ ಆಟಗಾರ ರಶೀದ್ ಖಾನ್ ಪ್ರತಿಕ್ರಿಯಿಸಿದ್ದು, ನಾನಿಲ್ಲದೇ ನೀವು ಡ್ಯಾನ್ಸ್ ಮಾಡಿದ್ದು ತಪ್ಪು ಎಂದು ಕಾಲೆಳೆದಿದ್ದಾರೆ. ಅಲ್ಲದೆ ಇರ್ಫಾನ್ ಪಠಾಣ್ ಅವರ ಬೆಂಬಲಕ್ಕೆ ಧನ್ಯವಾದವನ್ನು ಅರ್ಪಿಸಿದ್ದಾರೆ.