ನ್ಯೂ ಮೆಕ್ಸಿಕೋ: ಹಾಲಿವುಡ್ ನಟ ಮತ್ತು ಎರಡು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ಜೀನ್ ಹ್ಯಾಲ್ಮನ್ (95) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ನ್ಯೂ ಮೆಕ್ಸಿಕೋದಲ್ಲಿರುವ ಅವರ ಮನೆಯಲ್ಲಿ ಜೀನ್, ಅವರ ಪತ್ನಿ ಮತ್ತು ಅವರ ಸಾಕು ನಾಯಿ ಮೃತಪಟ್ಟಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ. ಅವರು ದಿ ಫ್ರೆಂಚ್ ಕನೆಕ್ಷನ್ ಮತ್ತು ‘ಬೋನಿ ಅಂಡ್ ಕ್ರೈಡ್’ ನಂತಹ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು 2 ಆಸ್ಕರ್, 3 ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.