ವಾಷಿಂಗ್ಟನ್: ಉಕ್ರೇನ್-ರಷ್ಯಾ ಯುದ್ಧಕ್ಕೆ ಸಂಬಂಧಿಸಿದಂತೆ ನಾವೀಗ ಕದನ ವಿರಾಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಅದು ಎಂದಿಗೂ ಪ್ರಯೋಜನಕಾರಿಯಾಗಲಿಲ್ಲ. ಪುಟಿನ್ ಅವರು 25 ಬಾರಿ ಕದನ ವಿರಾಮ ಘೋಷಿಸಿ, ಯುದ್ಧ ಮುಂದುವರಿಸಿದ್ದಾರೆ. ಭದ್ರತಾ ಖಾತ್ರಿಯಿಲ್ಲದೇ ಕದನ ವಿರಾಮ ಮುಂದುವರಿಸಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.ಓವಲ್ ಕಚೇರಿಯಲ್ಲಿ ನಾಯರಿಬ್ಬರ ಭೇಟಿ ಸಮಯದಲ್ಲಿ ಉಕ್ರೇನ್ ಅಧ್ಯಕ್ಷ ಭದ್ರತಾ ಒಪ್ಪಂದಗಳ ಕುರಿತು ಮಾತುಕತೆ ನಡೆಸಿದರು. ಈ ವೇಳೆ ಟ್ರಂಪ್-ಝಲೆನ್ಸ್ಕಿ ನಡುವೆ ಮಾತಿನ ಚಕಮಕಿಯೂ ನಡೆಯಿಯು. ಈಗ ನಾನು ಭದ್ರತೆಯ ಬಗ್ಗೆ ಈಗ ಮಾತನಾಡಲು ಬಯಸುವುದಿಲ್ಲ ಎಂದು ಟ್ರಂಪ್‌ಹೇಳಿದರು.
ನಾವು ಸಮಸ್ಯೆಗಳನ್ನು ಸರಿಪಡಿಸಲು ಎದುರುನೋಡುತ್ತಿದ್ದೇವೆ ಎಂದ ಟ್ರಂಪ್ ಯುದ್ಧ ನಿಲ್ಲಿಸುವ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಶ್ವೇತಭವನದಿಂದ ಹೊರಹೋಗುವಂತೆ ಸೂಚಿಸಿದರು.