ಬೆಂಗಳೂರು:: ಇಸ್ಲಾಂ ಪವಿತ್ರ ತಿಂಗಳಾದ ರಂಜಾನ್ ಆರಂಭವಾಗಿದ್ದು, ಮುಸ್ಲಿಮರು ಇಂದಿನಿಂದ ಉಪವಾಸದಲ್ಲಿ ತೊಡಗಿಕೊಂಡಿದ್ದಾರೆ.
ಮುಂಜಾನೆಯಿಂದ ಸೂರ್ಯಾಸ್ತದವರೆಗೆ 1 ತಿಂಗಳು ಉಪವಾಸ ನಡೆಯುತ್ತದೆ. ನಿನ್ನೆ ಚಂದ್ರ ದರ್ಶನ ಆಗಿದ್ದರಿಂದ ಮುಸ್ಲಿಮರು ಬೆಳಗ್ಗೆಯೇ ಊಟೋಪಚಾರ ಮುಗಿಸಿ ಉಪವಾಸ ಆರಂಭಿಸಿದ್ದಾರೆ.
ಇಂದು ಬೆಳಗ್ಗೆಯೇ ಅನೇಕ ಮಂದಿ ಮಸೀದಿಗಳಿಗೆ ತೆರಳಿ ನಮಾಜ್ ಮಾಡಿದ್ದಾರೆ. ಈ ಉಪವಾಸವನ್ನು ರೋಜಾ ಎಂದೂ ಕರೆಯುತ್ತಾರೆ. ರೋಜಾ ಆಚರಣೆಯಿಂದ ದೇವರ ಮೇಲಿನ ಭಕ್ತಿ ಹೆಚ್ಚಾಗುತ್ತದೆ ಎಂಬುದು ಮುಸ್ಲಿಮರ ನಂಬಿಕೆ.!